ಬೆಂಗಳೂರು: ಬೆಂಗಳೂರಿನ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಕೆಂಪೇಗೌಡರ ಹೆಸರನ್ನಿಟ್ಟಿದ್ದೇವೆ. ಹಾಗೆಯೇ ಏರ್‌ಪೋರ್ಟ್‌ಗೆ ಬರುವ ಪ್ರಯಾಣಿಕರಿಗೆ ಕೆಂಪೇಗೌಡರ ನಾಡಿನ ಹಿರಿಮೆ ತಿಳಿಯಲು ಈ ಪ್ರತಿಮೆ ನಿರ್ಮಾಣ ಬಹಳ ಸೂಕ್ತ. ರಾಜ್ಯದಲ್ಲೇ ಅತಿ ಎತ್ತರದ 108 ಅಡಿಗಳ ಮೂರ್ತಿ ಇದು. 220 ಟನ್ ಸ್ಟೀಲ್ ಮತ್ತು ಕಂಚನ್ನು ಬಳಸಿ ನಿರ್ಮಿಸಲಾಗುತ್ತಿದೆ.
ಬಸವರಾಜ್ ಬೊಮ್ಮಾಯಿ ಅವರು ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆ ಸಚಿವ ಅಶ್ವಥ್ ನಾರಾಯಣ್ ಕೋರಿಕೆ ಮೇರೆಗೆ ಕಾಮಗಾರಿ ಪರಿಶೀಲಿಸಿ ಕಾರ್ಮಿಕರ ಕೈಕುಲಿಕಿದರು. ಇದೇ ವೇಳೆ ಕೆಂಪೇಗೌಡರ ಪಾದಕ್ಕೆ ಪುಷ್ಪಾರ್ಪಣೆ ಮಾಡಿ ನಮಿಸಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
PublicNext
24/06/2022 10:15 pm