ಬೆಂಗಳೂರು: ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ ನಂತರ ಮೈಸೂರಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ಪೋರ್ಟ್ ರಸ್ತೆಯಲ್ಲಿ ಸಂಚಾರಿ ಪೊಲೀಸರು ಭದ್ರತೆಯ ರಿಹರ್ಸಲ್ ನಡೆಸಿದರು. ಇದರ ಅಂಗವಾಗಿ ವಿದ್ಯಾನಗರ ಕ್ರಾಸ್ ಬಳಿ ಪ್ಲೈಓವರ್‌ನಲ್ಲಿ 10 ನಿಮಿಷ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಕೆಳಗಿನ ಸರ್ವೀಸ್ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಅಂಗವಾಗಿ ರಸ್ತೆಯ ಅಗಲ ಸೀಮಿತವಾಗಿದೆ. ಜೊತೆಗೆ ಪ್ರಧಾನ ಮಂತ್ರಿಗಳ ಕ್ಯಾನ್ವಾಯ್ ಅಂಗವಾಗಿ ಪೊಲೀಸರ ಭದ್ರತೆ ಪರಿಶೀಲನೆ ಕಾರಣಗಳಿಂದ ಏರ್‌ಪೋರ್ಟ್ ರಸ್ತೆ ವಿದ್ಯಾನಗರ ಕ್ರಾಸ್ ಬಳಿ 20 ನಿಮಿಷಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಫ್ಲೈಓವರ್ ವಾಹನ ಸಂಚಾರಕ್ಕೆ ತೆರೆದ ಮೇಲೆ ವಾಹನ ಸ್ಲೋ ಮೂವಿಂಗ್ ಆಗಿ ಚಲಿಸುತ್ತಿವೆ.
ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಿಂದ 11ಗಂಟೆಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕೆಂಗೇರಿಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾಳೆದ್ದು ಜೂನ್ 21ಕ್ಕೆ ಮೈಸೂರಿನ ಅರಮನೆ ಮೈದಾನದಲ್ಲಿ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸುರೇಶ್ ಬಾಬು Public Next ಯಲಹಂಕ
PublicNext
19/06/2022 02:05 pm