ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಶಿಕ್ಷಣ ಸಚಿವ ನಾಗೇಶ್ ವಿರುದ್ಧ ದೋಷಾರೋಪಣೆ ಪಟ್ಟಿ ಬಿಡುಗಡೆ

ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯ ಸೌಹಾರ್ದತೆ ಹಾಗೂ ಐಕ್ಯತೆಗಾಗಿ ಒಂದು ವೇದಿಕೆ ಬಿಡುಗಡೆ ಮಾಡಿದೆ.

ಮಂಗಳವಾರ ಪ್ರೆಸ್ ಕ್ಲಬ್ ನಲ್ಲಿ ವೇದಿಕೆ ಮುಖಂಡ ಹಾಗೂ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಪತ್ರ ಬಿಡುಗಡೆ ಮಾಡಿದ್ದಾರೆ.

6 ದೋಷಗಳನ್ನು ಪಟ್ಟಿ ಮಾಡಿದ್ದಾರೆ...!

- ಕೊರೊನಾ ಬೀರಿದ ಪರಿಣಾಮಗಳನ್ನ ತಡೆಗಟ್ಟಲು ವಿಫಲ

- ಅಪೌಷ್ಟಿಕತೆಯನ್ನ ತಡೆಗಟ್ಟಲು ವಿಫಲ

- ಶಿಕ್ಷಣದ ಹಕ್ಕಿನ ನಿರಾಕರಣೆ

- ಪಠ್ಯಪುಸ್ತಕ ಪರಿಷ್ಕರಣೆ

- ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬ

- ಸಾಂವಿಧಾನಿಕ ಪ್ರತಿಜ್ಞೆಯನ್ನ ಅನುಸರಿಸಲು ವಿಫಲತೆ

ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು...

ಇಲ್ಲದಿದ್ರೆ, ಸಿಎಂ ಅವರು ರಾಜೀನಾಮೆ ಪಡೆಯಬೇಕು ಅಂತಾ ಒತ್ತಾಯ...

ಶಾಲಾ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ...!

ಹೀಗೆ ಸಚಿವ ನಾಗೇಶ್ ವಿರುದ್ಧ ದೋಷಾರೋಪಣೆ ಪಟ್ಟಿಯಾಗಿದ್ದು, ಪಠ್ಯ ಪರಿಷ್ಕರಣೆ ಗೌಪ್ಯವಾಗಿ ನಡೆದಿದೆ. ಬರಗೂರು ರಾಮಚಂದ್ರಪ್ಪ ಅವರ ಪಠ್ಯಪುಸ್ತಕ ಪರಿಷ್ಕರಣೆ ಪಾರದರ್ಶಕವಾಗಿತ್ತು ಎಂದು ಸಚಿವರ ವಿರುದ್ಧ ನಿರಂಜನ್ ಆರಾಧ್ಯ ಆರೋಪಿಸಿದರು.

Edited By : Nagesh Gaonkar
PublicNext

PublicNext

14/06/2022 07:11 pm

Cinque Terre

33.69 K

Cinque Terre

0

ಸಂಬಂಧಿತ ಸುದ್ದಿ