ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13ಹಳ್ಳಿಗಳಿಂದ ಎರಡನೇ ಹಂತದಲ್ಲಿ 1,800 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಏರ್‌ಪೋರ್ಟ್, ವಿಶೇಷ ಆರ್ಥಿಕ ವಲಯ ಮತ್ತು ಏರೋಸ್ಪೇಸ್‌ಗಾಗಿ ಸಾವಿರಾರು ಎಕರೆ ಜಮೀನನ್ನು ರೈತರು ಕಳೆದುಕೊಂಡಿದ್ದಾರೆ.
ಆದರೆ ಕೆಐಎಡಿಬಿ ಮೂಲಕ ಸರ್ಕಾರವೇ ದಲ್ಲಾಳಿಗಳ ರೀತಿ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಮೊದಲ ಹಂತದಲ್ಲೆ 1,500 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಸೂಕ್ತ ಪರಿಹಾರ ನೀಡಿಲ್ಲ. ಈಗ ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿರುವ ಕಾರಣ ರೈತರು ಯಾವ ಕಾರಣಕ್ಕು ಜಮೀನು ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹಾಗೂ ಕಳೆದ 75ದಿನಗಳಿಂದ ಚನ್ನರಾಯಪಟ್ಟಣ ನಾಡಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಪಕ್ಷಾತೀತವಾಗಿ ಜೂನ್ 17ಕ್ಕೆ ದೇವನಹಳ್ಳಿ ಬಂದ್‌ಗೆ ಕರೆ ನೀಡಲಾಗಿದೆ. ಇದೇ ವೇಳೆ ಮಾತನಾಡಿದ ಹೋರಾಟಗಾರರು ಬೆಳಗ್ಗೆ 6ರಿಂದ ಸಂಜೆ 6ರ ವರೆಗೂ ದೇವನಹಳ್ಳಿಯ ಎಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ ಎಂದರು.
PublicNext
13/06/2022 05:05 pm