ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸರ್ಕಾರಿ ಕನ್ನಡ ಬಾಲಕರ ಶಾಲೆ ಆವರಣದಲ್ಲಿ ಸಿಎಂ. ಬೊಮ್ಮಾಯಿ ನಾಳೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಸಿಎಂ ಆಗಮನ ಹಿನ್ನಲೆ ಹೊಸಕೋಟೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಸಿಎಂ ಬರುವುದರಿಂದ ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ರು. ನಾಳೆ ಬೆಳಿಗ್ಗೆ 11ಗಂಟೆಗೆ ಕಾರ್ಯಕ್ರಮ ಪ್ರಾರಂಭ ಆಗಲಿದೆ. ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಡಾ.ಸುಧಾಕರ್ ಭಾಗಿಯಾಗಲಿದ್ದಾರೆ. ಈಗಾಗಲೇ ಶಾಸಕ ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಡುವೆ ಅನೇಕ ಸಲ ಗದ್ದಲ ನಡೆದಿದೆ. ಹೀಗಾಗಿ ಹೊಸಕೋಟೆ ನಗರದಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಹೊಸಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಚಾಲನೆ, ಸವಲತ್ತುಗಳ ವಿತರಣೆ ಸಮಾರಂಭದ ಜೊತೆ ಚನ್ನಬೈರೇಗೌಡ ಕ್ರಿಡಾಂಗಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಲಿ ಸಿಎಂ ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ಬೃಹತ್ ವೇದಿಕೆ ಸಿದ್ದತೆ, ಜನರಿಗೆ ಅಸನ, ಊಟೋಪಚಾರ ವ್ಯವಸ್ಥೆ ಸೇರಿ ಎಲ್ಲಾ ಕೆಲಸ ಕಾರ್ಯ ಬರದಿಂದ ಸಾಗಿವೆ ಎಂದು ಸಣ್ಣಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
SureshBabu Public Next ಹೊಸಕೋಟೆ..
PublicNext
06/06/2022 11:06 pm