ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಿದ್ಧತೆ ಆರಂಭವಾಗಿದೆ. ಇಂದು ವಾರ್ಡ್ ಮರುವಿಂಗಡಣೆ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಯಾಗಲಿದೆ. ಎಂಟು ವಾರದೊಳಗೆ ಚುನಾವಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆಗೆ ವಾರ್ಡ್ ಗಳ ಮರುವಿಂಗಡಣೆ ವರದಿಯನ್ನು ಸಲ್ಲಿಸಲಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಮೂಲಕ ಸಿಎಂಗೆ ವಾರ್ಡ್ ಮರುವಿಂಗಡಣೆ ಕರಡು ರವಾನೆಯಾಗಲಿದೆ. ಮರುವಿಂಗಡಣೆಯನ್ನು ಸರ್ಕಾರ ಅನುಮೋದಿಸಿದರೆ ಎರಡು ವಾರ ಕಾಲ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗುವುದು.
ಇದಾದ ಬಳಿಕ ಮೀಸಲಾತಿ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಲಿದ್ದು, ನಂತರ ಚುನಾವಣೆಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.
ಚುನಾವಣೆ ಸಿದ್ಧತೆ ಕುರಿತು ಅನೌಪಚಾರಿಕ ಚರ್ಚೆ ನಡೆದಿದ್ದು, 198 ವಾರ್ಡ್ ಗಳನ್ನು 243ಕ್ಕೆ ಹೆಚ್ಚಳ ಮಾಡಿ ಚುನಾವಣೆ ನಡೆಸಲು ಸಿದ್ಧತೆ ಆರಂಭವಾಗಿವೆ. ಶೇ.50ಕ್ಕೆ ಮೀರದಂತೆ ಮೀಸಲಾತಿ ನಿಗದಿ ಮಾಡಲು ಬಿಬಿಎಂಪಿ ಕಾಯ್ದೆ-2022 ತಿದ್ದುಪಡಿ ಪ್ರಸ್ತಾವನೆಗೆ ಸಚಿವ ಸಂಪುಟ ಸಮ್ಮತಿ ನೀಡಿದೆ.
Kshetra Samachara
31/05/2022 07:59 pm