ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾವೇರಿ ನಗರದಲ್ಲಿ ಅದ್ದೂರಿ ಪಲ್ಲಕ್ಕಿ ಉತ್ಸವ,

ವರದಿ- ಬಲರಾಮ್ ವಿ

ಬೆಂಗಳೂರು: ಬೆಂಗಳೂರಿನ ಮಹದೇವಪುರ ಕ್ಷೇತ್ರದ ಕಾವೇರಿನಗರದಲ್ಲಿ ಗ್ರಾಮದೇವತೆಗಳ ಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ವಿನಾಯಕ ಸ್ವಾಮಿ, ಆಂಜನೇಯ ಸ್ವಾಮಿ, ಮಂಜುನಾಥ ಸ್ವಾಮಿ, ವೆಂಕಟರಮಣ ಸ್ವಾಮಿ, ಅಯ್ಯಪ್ಪ ಸ್ವಾಮಿ, ಭುವನೇಶ್ವರಿ, ಓಂಶಕ್ತಿ, ಮಾರಿಯಮ್ಮ ಸೇರಿದಂತೆ 30 ಕ್ಕು ಹೆಚ್ಚಿನ ಹೂವಿನ ಪಲ್ಲಕ್ಕಿ, ಬೆಳ್ಳಿರಥ ಪಲ್ಲಕ್ಕಿಗಳ ಉತ್ಸವ ಜರುಗಿದವು.

ದಿವಂಗತ ನಟ ಡಾ. ಪುನಿತ್ ರಾಜ್ ಕುಮಾರ್ ಭಾವಚಿತ್ರವನ್ನು ಬಹುತೇಕ ಪಲ್ಲಕ್ಕಿಗಳಲ್ಲಿ ಇರಿಸಿ ಪೂಜಿಸಿದ್ದು ವಿಶೇಷವಾಗಿತ್ತು. ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿದ್ದರು.

ಇನ್ನು ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ಅಂಗವಾಗಿ ರಸಮಂಜರಿ ಕಾರ್ಯಕ್ರಮ, ತಮಟೆ ವಾದ್ಯಗಳ ಮೆರವಣಿಗೆ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Edited By :
Kshetra Samachara

Kshetra Samachara

24/05/2022 03:38 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ