ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ವಸತಿ ಯೋಜನೆ ಉಳ್ಳವರ ಪಾಲು; ಸರ್ಕಾರ ಆಲಿಸಲಿ ಬಡವರ ಅಹವಾಲು"

ದೊಡ್ಡಬಳ್ಳಾಪುರ: ತಾಲೂಕಿನಾದ್ಯಂತ 3 ಸಾವಿರಕ್ಕೂ ಹೆಚ್ಚು ನಿರಾಶ್ರಿತರಿದ್ದಾರೆ. ಸರಕಾರ ಜಾರಿಗೊಳಿಸುವ ವಸತಿ ಯೋಜನೆ ಕೇವಲ ಉಳ್ಳವರ ಪಾಲಾಗುತ್ತಿದೆ. ನಿಜವಾದ ಬಡವನಿಗೆ ಸರಕಾರದ ಯೋಜನೆಗಳು ದೊರಕುತ್ತಿಲ್ಲ ಎಂದು ಜನಪರ ಹೋರಾಟಗಳ ಒಕ್ಕೂಟ ಅಧ್ಯಕ್ಷ ನಂಜುಂಡಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಾಲೂಕು ಕಚೇರಿ ಮುಂಭಾಗ ಜನಪರ ಹೋರಾಟಗಳ ಒಕ್ಕೂಟ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಆಶ್ರಯ ಮನೆಗಳ ಹಂಚಿಕೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿಜವಾದ ಫಲಾನುಭವಿಗಳನ್ನು ಗುರುತಿಸಿಲ್ಲ. ತಮ್ಮ ಹಿಂಬಾಲಕರಿಗೆ, ಲಂಚ ಕೊಟ್ವವರಿಗೆ ಮಾತ್ರ ಮನೆ ಹಂಚಿಕೆ ಮಾಡಿದ್ದಾರೆ.

15 ವರ್ಷಗಳಿಂದ ಆಶ್ರಯ ಮನೆಗಳಲ್ಲಿ ವಾಸ ಮಾಡುತ್ತಿರುವ ನಿರ್ಗತಿಕರನ್ನು ಒಕ್ಕಲೆಬ್ಬಿಸುವ ಯತ್ನ ನಡೆಯುತ್ತಿದೆ. ಶೀಘ್ರ ಸರಕಾರಿ ಜಾಗ ಗುರುತಿಸಿ ಅರ್ಹ ಫಲಾನುಭವಿಗಳನ್ನು ಪಟ್ಟಿ ಮಾಡಿ ಸೂರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಮುಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಹೋರಾಟ ನಡೆಸಲಾಗುವುದು ಎಂದರು.

ಮುಖಂಡ ಗಂಗಾಧರ್ ಮಾತನಾಡಿ, "ಅಧಿಕಾರಿಗಳು ನಿರಾಶ್ರಿತರಿಗೆ ಸೂರಿನ ವ್ಯವಸ್ಥೆ ಮಾಡಲು ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಜಮೀನು ಗುರುತಿಸಿ ಸರಕಾರಕ್ಕೆ ವರದಿ ಕಳಿಸಲು ಕ್ರಮ ವಹಿಸಲಾಗಿದೆ" ಎಂದು ಹೇಳುತ್ತಿದ್ದಾರೆ. ಅವರ ಮಾತು ಕೇವಲ ಭರವಸೆಯಾಗಿ ಉಳಿಯದೆ ಕಾರ್ಯರೂಪಕ್ಕೆ ಬರಬೇಕು ಎಂದರು. ಇದಕ್ಕೂ ಮುನ್ನ ನಗರದ ಸೋಮೇಶ್ವರ ದೇಗುಲದಿಂದ ತಾಲೂಕು ಕಚೇರಿ ವರೆಗೂ ಪ್ರತಿಭಟನೆ ಜಾಥಾ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

10/05/2022 08:35 am

Cinque Terre

3.99 K

Cinque Terre

0

ಸಂಬಂಧಿತ ಸುದ್ದಿ