ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಬಿಜೆಪಿ ಸೇರ್ಪಡೆ ಪರ್ವ'; ಸಿಎಂ ಬೊಮ್ಮಾಯಿ ಖುಷಿ ವ್ಯಕ್ತ

ಬೆಂಗಳೂರು: ಒಂದೆಡೆ ಭ್ರಷ್ಟಾಚಾರ, ಅಕ್ರಮ ನೇಮಕಾತಿ ವಿಚಾರದಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ತಿರುಗಿ ಬಿದ್ದು ಪ್ರೊಟೆಸ್ಟ್ ಜತೆಗೆ ಸಾಕ್ಷ್ಯ ಕೆದಕುವುದ್ರಲ್ಲಿ ಬ್ಯುಸಿಯಾಗಿದೆ. ಆದ್ರೆ, ಬಿಜೆಪಿ ಸೈಲೆಂಟಾಗಿ ಬೇರೆ ಪಕ್ಷದ ನಾಯಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ನಿರತವಾಗಿದೆ.

ಮಂಡ್ಯ ಪ್ರಮುಖ ಟಾರ್ಗೆಟ್ ಆಗಿದ್ದು, ಸಂಸದೆ ಸುಮಲತಾ ಅಂಬರಿಶ್ ಅವರನ್ನು ಸಂಪರ್ಕಿಸಲಿದ್ದಾರೆ. ಈಗಾಗ್ಲೇ ಆಪರೇಶನ್ ಕಮಲ ಖೆಡ್ಡಕ್ಕೆ ಬಿದ್ದಿರುವ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ನಿವೃತ್ತ IRS ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ಕೂಡ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರಂತೆ.

ಇನ್ನು, ಈ ಆಪರೇಶನ್ ಕಮಲಕ್ಕೆ ಟಾರ್ಗೆಟ್ ಆಗಿರುವ ಪಕ್ಷ ಅಂದ್ರೆ ಅದು ಜೆಡಿಎಸ್.‌ ಆ ಪಕ್ಷದ ಪ್ರಾಬಲ್ಯವಿರುವ ಮಂಡ್ಯ ಮತ್ತು ಕೋಲಾರ ವಿಭಾಗದ ನಾಲ್ವರು ಮುಖಂಡರು ಬಿಜೆಪಿ ಸೇರಲು ಮುಹೂರ್ತ ಇಂದು ಫಿಕ್ಸ್ ಆಗಿದೆ. ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.

Edited By :
PublicNext

PublicNext

07/05/2022 01:42 pm

Cinque Terre

22.55 K

Cinque Terre

3

ಸಂಬಂಧಿತ ಸುದ್ದಿ