ನೆಲಮಂಗಲ: ಬಸವ ಜಯಂತಿ ಹಾಗೂ ಅಡಿಗಲ್ಲು ಪೂಜೆ ಅಂಗವಾಗಿ ಬಿಎಸ್ ವೈ, ವಿಜಯೇಂದ್ರ ಮತ್ತು ಕುಟುಂಬಸ್ಥರು ಬೆಂ.ಗ್ರಾ. ಜಿಲ್ಲೆ ನೆಲಮಂಗಲ ತಾಲೂಕು ದೊಡ್ಡೇರಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ದೊಡ್ಡೇರಿ ಗ್ರಾಮದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಹಿಂಭಾಗದಲ್ಲಿ ಸಮಾಧಾನ ಮಠದ ಧ್ಯಾನ ಮಂದಿರ, ವೃದ್ಧಾಶ್ರಮ ಮತ್ತು ಆಯುರ್ವೇದ ಭವನ ಅಡಿಕಲ್ಲು ಸಮಾರಂಭ ಪೂಜೆಗೆ ಆಗಮಿಸಿದ್ದ ಬಿಎಸ್‌ವೈ ಕುಟುಂಬಸ್ಥರು ಪೂಜಾ ಕೈಂಕರ್ಯ ನೆರವೇರಿಸಿದರು.
ಪೂಜಾ ಕೈಂಕರ್ಯ ಬಳಿಕ ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗ ಮಹಾ ಸ್ವಾಮೀಜೀ ಗಳಿಂದ ಬಿಎಸ್‌ವೈ ಕುಟುಂಬ ಆಶೀರ್ವಾವದ ಪಡೆದ್ರು.ಇದೇ ವೇಳೆ ಬಿಜೆಪಿ ಮುಖಂಡ ಮರಿಸ್ವಾಮಿ, ನೆಲಮಂಗಲ ಮಾಜಿ ಶಾಸಕ ಎಂ.ನಾಗರಾಜು ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪೂಜೆ ಬಳಿಕ ಬೆಂಗಳೂರು ಕಡೆಗೆ ತೆರಳಿದ ಬಿಎಸ್ ವೈ ಮತ್ತು ಕುಟುಂಬ ತೆರಳಿದರು.
Kshetra Samachara
03/05/2022 03:40 pm