ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಷ್ಟ್ರೀಯ ವಿಪತ್ತು ‌ನಿರ್ವಹಣಾ ಪುನಶ್ಚೇತನ ಕೇಂದ್ರದ ಉದ್ಘಾಟನೆಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿರುವ BSF Signals Training Center ಕ್ಯಾಂಪಸ್‌ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪುನಶ್ಚೇತನ ಕೇಂದ್ರದ ಉದ್ಘಾಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಿಗಿ ಭದ್ರತೆಯಲ್ಲಿ ಕ್ಯಾಂಪಸ್‌ಗೆ ಆಗಮಿಸಿದರು.

ದೇಶದ ಆಂತರಿಕ ಭಧ್ರತೆಯ ಅತ್ಯುತ್ತಮ ಸೌಲಭ್ಯಗಳ, ಗುಪ್ತ ಮಾಹಿತಿ ಸಂಗ್ರಹ ಮತ್ತು ನಿರ್ವಹಣೆಯ ದೃಷ್ಟಿಯಿಂದ NATGRID ಸೆಂಟರ್ ಅತಿ ಮುಖ್ಯವಾದುದು. ಯಾವುದೇ ಅನಿವಾರ್ಯ ಸಂದರ್ಭಗಳಲ್ಲಿ ಭದ್ರತೆಯಿಂದ ಎದುರಾಗಬಹುದಾದ ಸಂಕಷ್ಟ, ತೊಂದರೆ, ವಿಪತ್ತಿನ ಸನ್ನಿವೇಶಗಳಲ್ಲಿ ಈ ಕೇಂದ್ರವೂ ಗೃಹ ಇಲಾಖೆಗೆ ಮಾಹಿತಿ ರವಾನಿಸುತ್ತದೆ. ಭದ್ರತೆಗೆ ಸಂಬಂಧಿಸಿದ ವಿಪತ್ತು ಮತ್ತು ನಿರ್ವಹಣೆಗಾಗಿ ಕೇಂದ್ರವೂ ಉದ್ಘಾಟನೆಯಾಗಲಿದೆ.

ಗೃಹ ಇಲಾಖೆ ನಿಯಂತ್ರಣದ ಕೇಂದ್ರವಾದ್ದರಿಂದ ಕೇಂದ್ರ ಗೃಹಸಚಿವ ಅಮಿತ್ ಷಾ ಇಂದು ಉದ್ಘಾಟಿಸಲಿದ್ದಾರೆ. ಮದ್ಯಾಹ್ನ‌ದ ನಂತರ NATGRID ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಿ, ರಾತ್ರಿಗೆ ಅಮಿತ್ ಷಾ ದೆಹಲಿಗೆ ತೆರಳುವರು..

ಅಂತೂ ಅಮಿತ್ ಷಾ ಯಲಹಂಕಕ್ಕೆ ಬಂದಿದ್ದರಿಂದ ಸುತ್ತಲೂ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

Edited By : Shivu K
PublicNext

PublicNext

03/05/2022 03:13 pm

Cinque Terre

26.16 K

Cinque Terre

1

ಸಂಬಂಧಿತ ಸುದ್ದಿ