ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದ BSF Campus ನ NATGRID ಸೆಂಟರ್ಗೆ ಅಮಿತ್ ಶಾ ಆಗಮನ-ಪೊಲೀಸರಿಂದ ಭಾರಿ ಭದ್ರತೆ.

ಯಲಹಂಕ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಂಗಳೂರಿನ ಯಲಹಂಕ ಸಮೀಪದ ಸಾತನೂರು BSF ಕ್ಯಾಂಪಸ್ ನಲ್ಲಿರುವ NATGRID ಸೆಂಟರ್ ಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ.

ದೇಶದ ಭದ್ರತೆಯ ದೃಷ್ಟಿಯಿಂದ ಯಲಹಂಕದ Natgrid ಸೆಂಟರ್ ತಾಂತ್ರಿಕವಾಗಿ ಬಹಳ ಮುಖ್ಯವಾದ ಸಿಗ್ನಲ್ಸ್ ನಿಯಂತ್ರಣ ಕೇಂದ್ರವಾಗಿ ಸಿದ್ಧವಾಗಿದೆ.

ದೇಶದ ಆಂತರೀಕ ಭದ್ರತೆ ದೃಷ್ಟಿಯಿಂದ ಅಮಿತ್ ಶಾ ಇಂದು ಉದ್ಘಾಟಿಸಲಿರುವ ಈ ಕೇಂದ್ರ ಬಹಳವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರಧಾನಮಂತ್ರಿ ನಂತರದ ಸ್ಥಾನದಲ್ಲಿರುವ ಕೇಂದ್ರ ಗೃಹ ಸಚಿವರಿಗೆ ಭಯೋತ್ಪಾದಕರಿಂದ ಜೀವ ಬೆದರಿಕೆ ಇರುವುದರಿಂದ ನಗರ ಪೊಲೀಸರು ಭಾರೀ ಭದ್ರತೆ ವ್ಯವಸ್ಥೆ ಕಲ್ಪಿಸಿದ್ದಾರೆ.

ಬೆಂಗಳೂರು ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಾಗಲೂರು‌ ಕ್ರಾಸ್‌ನಿಂದ BSF ಸಿಗ್ನಲ್ಸ್ ಟ್ರೈನಿಂಗ್ ಸೆಂಟರ್ ಗೆ 3.ಕಿ.ಮೀ.ಅಂತರ ಇದ್ದು, ಭಾರಿ ಭದ್ರತೆಯನ್ನು ‌ನಗರ ಪೊಲೀಸರು ಕೈಗೊಂಡಿದ್ದಾರೆ.

SureshBabu PublicNext ಯಲಹಂಕ..

Edited By : Manjunath H D
PublicNext

PublicNext

03/05/2022 02:53 pm

Cinque Terre

25.06 K

Cinque Terre

0

ಸಂಬಂಧಿತ ಸುದ್ದಿ