ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೇ 1 ಕ್ಕೆ ‌ಜನತಾ ಜಲಧಾರೆ ರಥಯಾತ್ರೆ ಕ್ಷೇತ್ರಕ್ಕೆ ಆಗಮನ : ಶಾಸಕ ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಭವನದಲ್ಲಿ ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಆರ್.ಮುನೇಗೌಡರ ಅಧ್ಯಕ್ಷತೆಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮದ ಬಗ್ಗೆ ವಿಚಾರ ವಿನಿಮಯ ನಡೆಯಿತು..

ಜಾತ್ಯಾತೀತ ಜನತಾದಳ ಪಕ್ಷ ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದ ಜನತೆಗೆ, ಜಾನುವಾರುಗಳಿಗೆ, ಸಮರ್ಪಕವಾಗಿ ನೀರು ಒದಗಿಸಲು ಜನತಾ ಜಲಧಾರೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಿಳಿಸಿದೆ. ಇಂದು ದೇವನಹಳ್ಳಿಯ ಜೆಡಿಎಸ್ ಭವನದಲ್ಲಿ‌ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶಾಸಕರು ನೀರಿಗಾಗಿ‌ ಮುಂದಿನ ದಿನಗಳಲ್ಲಿ ಬಲವಾದ ಹೋರಾಟ ನಡೆಸುತ್ತೇವೆ ಎಂದರು..

ದೇವನಹಳ್ಳಿ ಜೆ.ಡಿ.ಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ರೈತರಿಗೆ, ಜಾನುವಾರುಗಳಿಗೆ ಮತ್ತು ಸಾರ್ವಜನಿಕರಿಗೆ ಮನೆಮನೆಗೆ ನೀರಿನ ಕೊಳಾಯಿ ನೀಡುವ ಉದ್ದೇಶದಿಂದ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮೇಕೆದಾಟಿನಿಂದ ಆರಂಭವಾದ ಜಲಧಾರೆ ಇಡೀ ರಾಜ್ಯಾದ್ಯಂತ ರಥ ಪ್ರವಾಸ ಮಾಡಿ ನೀರನ್ನು ಸಂಗ್ರಹಿಸಲಾಗುತ್ತಿದೆ. ದೇವನಹಳ್ಳಿ ಕ್ಷೇತ್ರಕ್ಕೆ ಮೇ ಒಂದಕ್ಕೆ ಆಗಮಿಸುತ್ತಿದ್ದಾರೆ. ಎರಡನೇ ತಾರೀಖು ವಿಜಯಪುರದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಪಕ್ಷದ ಅಧ್ಯಕ್ಷರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೇವನಹಳ್ಳಿಯ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು..

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ, PLDಬ್ಯಾಂಕ್ ಮಾಜಿ ಅಧ್ಯಕ್ಷ ಮುನಿರಾಜು ಸೇರಿದಂತೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿ ರಾಜ್ಯಾದ್ಯಂತ ಕುಡಿಯುವ ನೀರಿಗಾಗಿ ಜೆಡಿಎಸ್ ಪಕ್ಷವನ್ನು, ಹೋರಾಟವನ್ನು ಬಲಪಡಿಸುತ್ತೇವೆ ಎಂದು ಶಾಸಕರು ಆಶಾವಾದ ವ್ಯಕ್ತಪಡಿಸಿದರು..

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ..

Edited By : Nagesh Gaonkar
PublicNext

PublicNext

28/04/2022 10:31 pm

Cinque Terre

49.82 K

Cinque Terre

0

ಸಂಬಂಧಿತ ಸುದ್ದಿ