ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಡಿತರ ಅಂಗಡಿಯಲ್ಲಿ ಬಿಜೆಪಿ ಪಕ್ಷದ ಚಿನ್ಹೆ; ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ

ಬೆಂಗಳೂರು ದಕ್ಷಿಣ: ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಪ್ರಧಾನಮಂತ್ರಿಯವರ ಗರೀಬ್ ಕಲ್ಯಾಣ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಚಿನ್ಹೆಯನ್ನು ಬಳಸಿ ಬ್ಯಾನರ್ ಹಾಕಿರುವುದನ್ನ ಖಂಡಿಸಿ ಜಿಗಣಿಯಲ್ಲಿ ಕಾಂಗ್ರೆಸ್ ಮುಖಂಡರು ಕಪ್ಪು ಪಟ್ಟಿಯನ್ನ ಧರಿಸಿ ಪ್ರತಿಭಟನೆಯನ್ನ ನಡೆಸಿದರು.

ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಈ ರೀತಿ ಪಕ್ಷದ ಚಿನ್ಹೆ ಬಳಸಿ ಸಾರ್ವಜನಿಕರಿಗೆ ಪಡಿತರ ನೀಡುತ್ತಿರುವ ಕುರಿತು ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಪುರಸಭಾ ಸದಸ್ಯರು ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರದ ಯೋಜನೆಯಾದರೆ ಮೋದಿರವರ ಫೋಟೋ ಹಾಕಿ, ಆದರೆ ಒಂದು ಪಕ್ಷದ ಚಿನ್ಹೆಯನ್ನು ಬಳಸಿ ಪಡಿತರ ನೀಡುತ್ತಿರುವುದು ಸಾರ್ವಜನಿಕರಿಗೆ ಬೇರೆ ರೀತಿಯ ಸಂದೇಶ ರವಾನೆಯಾಗುತ್ತದೆ ಎಂದು ಕಿಡಿಕಾರಿದರು.

Edited By : Nagesh Gaonkar
PublicNext

PublicNext

27/04/2022 09:55 pm

Cinque Terre

46 K

Cinque Terre

0

ಸಂಬಂಧಿತ ಸುದ್ದಿ