ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ಚುನಾವಣೆ ವಿಚಾರಣೆ ಯಿಂದ ಹಿಂದೆ ಸರಿದ ನ್ಯಾ.ಅಭಯ್ ಒಕಾ

ಹೊಸದೆಹಲಿ: ಬಿಬಿಎಂಪಿಯ ಶೀಘ್ರವಾಗಿ ಚುನಾವಣೆ ನಡೆಸುವ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯಿಂದ ನ್ಯಾ. ಅಭಯ ಚಂದ್ರ ಒಕಾ ಹಿಂದೆ ಸರಿದಿದ್ದಾರೆ.

ಕರ್ನಾಟಕ ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿ ಆಗಿದ್ದ ಸಂದರ್ಭದಲ್ಲಿ ಈ ಪ್ರಕರಣದ ತೀರ್ಪು ನೀಡಿದ್ದರು. ಆ ಆದೇಶವನ್ನೆ ಪ್ರಶ್ನಿಸಿರುವ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.

ಹೀಗಾಗಿ ಈ ಪ್ರಕರಣ‌ ಮತ್ತೊಂದು ಪೀಠಕ್ಕೆ ವರ್ಗಾವಣೆ ಆಗಿದ್ದು, ವಿಚಾರಣೆ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ಇದೆ. ಇದರಿಂದ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಮತ್ತಷ್ಟು ತಿಂಗಳ ಕಾಲ ಚುನಾವಣೆ ಮುಂದೂಡುವ ಸಂಬವ ಇದೆ .

Edited By : PublicNext Desk
Kshetra Samachara

Kshetra Samachara

26/04/2022 10:20 am

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ