ಯಲಹಂಕ: 40 ಪರ್ಸೆಂಟ್ ಬಿಜೆಪಿಯಿಂದ ರಾಜ್ಯದ ಲೂಟಿಯಾಗ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಮತ್ತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತಮ್ಮದೇ ದಾಟಿಯಲ್ಲಿ ಟಾಂಗ್ ಕೊಟ್ಟಿದ್ದಾರೆ. 'ಕುಂಬಳಕಾಯಿ ಕಳ್ಳ ಅಂದರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಾ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಆರೋಪ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ' ಎಂದರು.
ತಿಹಾರ ಜೈಲಿಗೆ ಹೋದಾಗ ಡಿಕೆ.ಶಿವಕುಮಾರ್ ಅವರ ಬಗ್ಗೆ ತನಿಖೆ ನಡೆಸಿಯೇ ಕಳುಹಿಸಿದ್ದು. ಇನ್ನು ಸಿದ್ದರಾಮಯ್ಯ ಅವರ ಮಾತಿನ ಬಗ್ಗೆ ನಾವು ಕ್ಯಾರೆ ಅನ್ನಲ್ಲ. 40 ಪರ್ಸೆಂಟ್ ಆರೋಪ ಮಾಡ್ತಾರೆ. ಇದು ಸಾಧ್ಯವೇ. ಕಾಂಗ್ರೆಸ್ ಕಾಲದಲ್ಲಿ 100 ಕಾಮಗಾರಿ ನಡೆಸದೇ ಬಿಲ್ ಮಾಡಿಕೊಳ್ಳುತ್ತಿದ್ದರು. ಕಲ್ಲಿದ್ದಲು ಮತ್ತು 2ಜಿ ಹಗರಣಗಳನ್ನ ಜನ ಮರೆತಿಲ್ಲ ಎಂದರು.
ಸದ್ಯ ರಾಜ್ಯದಲ್ಲಿ ಉಲ್ಬಣ ಆಗಿರುವ ಕೋಮು ಗಲಭೆಗಳಿಗೆ ಕಾಂಗ್ರೆಸ್ ಪಕ್ಷ ತುಪ್ಪವನ್ನು ಸುರಿಯುತ್ತಿದೆ. ಜನರು ಜಾಣರಿದ್ದಾರೆ. ಎಲೆಕ್ಷನ್ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಏನೇನೊ ಮಾಡಲು ಹೊರಟು ಕೈ ಸುಟ್ಟುಕೊಳ್ಳುತ್ತದೆ ಎಂದು ಯಲಹಂಕ್ ಖಾಸಗಿ ಕಾರ್ಯಕ್ರಮದಲ್ಲಿ Public Next ಗೆ ಪ್ರತಿಕ್ರಿಯಿಸಿದ್ದಾರೆ.
PublicNext
24/04/2022 10:46 pm