ಆನೇಕಲ್ : ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ವನಕಣನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸಿ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಮತದಾನ ನಡೆಯುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯೆ ವೆಂಕಟಲಕ್ಷ್ಮಮ್ಮ ಎಂಬವರನ್ನ ಎರಡು ದಿನಗಳ ಹಿಂದೆ ಹೈಜಾಕ್ ಮಾಡಲಾಗಿದೆ ಎಂದು ಚುನಾಯಿತ ಪ್ರತಿನಿಧಿಗಳು ಆರೋಪಿಸಿ ಏ.22 ರಂದು ಪ್ರತಿಭಟನೆ ನಡೆಸಿದ್ದಾರೆ.
ಹೌದು ವನಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ಸನತ್ ಕುಮಾರ್ ಹಾಗೂ ರಾಮಕ್ಕ ಎಂಬುವವರು ನಾಮಪತ್ರ ಸಲ್ಲಿಸಿದರು ಮತದಾನ ಮಾಡುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ವೆಂಕಟಲಕ್ಷ್ಮಮ್ಮ ಎಂಬವರು ಮತದಾನ ಮಾಡುವ ಸಂದರ್ಭದಲ್ಲಿ ಆನೇಕಲ್ ಪೊಲೀಸರು ಬಂದು ಸರ್ಜಾಪುರದಲ್ಲಿ ನಿಮ್ಮ ಮಗ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ ಆಸ್ಪತ್ರೆಯಲ್ಲಿ ಇದ್ದಾನೆ ಅಂತ ಮಾಹಿತಿ ನೀಡಿದರು.
ಬಳಿಕ ವೆಂಕಟಲಕ್ಷ್ಮಮ್ಮ ಮತದಾನ ಮಾಡದೆ ಹೊರಬಂದಿದ್ದರು. ಮತ್ತೆ ಅರ್ಧ ಗಂಟೆ ಬಿಟ್ಟು ಮತದಾನ ಜಾಗಕ್ಕೆ ಬಂದು ನಾನು ಯಾರು ಪರವಾಗಿ ಮತದಾನ ಮಾಡುವುದಿಲ್ಲ ಅಂತ ಹೇಳಿಕೆ ನೀಡಿ ವಾಪಸಾದರು.
ಅದಲ್ಲದೇ ವೆಂಕಟಲಕ್ಷ್ಮಮ್ಮ ಗಂಡ 2ದಿನಗಳ ಹಿಂದೆ ಹೆಂಡತಿ ನಾಪತ್ತೆ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎರಡು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆ ಮತದಾನದ ದಿನದಂದು ಕಾಣಿಸಿಕೊಂಡು ಹೈಡ್ರಾಮಕ್ಕೆ ಸಾಕ್ಷಿಯಾಗಿದೆ.
ಇನ್ನು ಉಪಾಧ್ಯಕ್ಷ ನಾಮ ಪತ್ರಿಕೆ ಸಲ್ಲಿಕೆ ಮಾಡಿದ್ದ ರಾಮಕ್ಕ ಪರ ಗ್ರಾಮ ಪಂಚಾಯಿತಿ ಸದಸ್ಯರು ಸವಿತಾ ಸನತ್ ಕುಮಾರ್ ಜೊತೆ ವೆಂಕಟಲಕ್ಷ್ಮಮ್ಮ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿಯ ಮುಂದೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಇದರಿಂದ ಕೆಲ ಗಂಟೆಗಳ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ ಪೊಲೀಸರು ನಿಯಂತ್ರಣ ಮಾಡಲು ಹರಸಾಹಸ ಪಟ್ಟರು. ಸ್ಥಳಕ್ಕೆ ಆನೇಕಲ್ ತಹಶೀಲ್ದಾರ್ ದಿನೇಶ್ ಕುಮಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ದಿನೇಶ್ ಕೂಲಂಕುಷವಾಗಿ ಪರಿಶೀಲನೆ ಮಾಡಿದ್ದೇವೆ ಒಬ್ಬ ಅಭ್ಯರ್ಥಿ ನಾಪತ್ತೆ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಆ ಬಗ್ಗೆ ವಿಚಾರಣೆ ಮಾಡಲು ಕರೆಸಿಕೊಂಡಿದ್ದಾರೆ ಈ ಬಗ್ಗೆ ತನಿಖೆ ಮುಂದುವರಿಸುತ್ತೇನೆ ಎಂದು ತಿಳಿಸಿದರು.
PublicNext
23/04/2022 03:08 pm