ಬೆಂಗಳೂರು: ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ವಿಜಯಪುರದಲ್ಲಿಂದು ಬಿಜೆಪಿ ಸಮಾವೇಶ ನಡೆಯಿತು. ಇಲ್ಲಿ ಸಿಟಿ.ರವಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ನಾನು ಹಿಂದೂ ಅಂತಾರೆ. ಕುಂಕುಮ ಇಡೋರನ್ನ ಕಂಡರೆ ಆಗಲ್ಲ. ಕೇಸರಿ ಟೋಪಿ ಹಾಕೋಕೆ ಬಂದಾಗ ಏನು ಮಾಡಿದ್ರು? ಏನು ಕಿತ್ತಾಕಿದ್ರು? ಇದು ಸಿದ್ದು ಹಿಂದುತ್ವ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಪ್ರಶ್ನೆ ಮಾಡಿದ್ದಾರೆ.
ನಮ್ಮ ತಾಯಂದಿರು ಕುಂಕಮ ಇಡ್ತಾರಾ ಇಲ್ವಾ.!? ಕುಂಕುಮ ಇಟ್ಟವರು ಯಾರಾದ್ರೂ ಬಾಂಬ್ ಹಾಕಿದ್ದಾರಾ..!? ಬಾಂಬ್ ಹಾಕೋವರು ಯಾರು.!? ಟೋಪಿ ಹಾಕಿದವರು.! ಅಂತ ಸನ್ನೆ ಮಾಡಿ ಸಿ.ಟಿ.ರವಿ. ತೋರಿಸಿದರು. ಟೋಪಿ ಕಂಡರೆ ಸಿದ್ದರಾಮಯ್ಯನಿಗೆ ಬಹಳ ಪ್ರೀತಿ ಎಂದು ವ್ಯಂಗ್ಯವಾಡಿದರು.
ಇನ್ನು ಕೇಸರಿ ಪೇಟಾ ತೊಟ್ಟವರು ಯಾರು ಬಾಂಬ್ ಹಾಕಲಿಲ್ಲ. ಕೇಸರಿ ಶಾಲು ಹಾಕಿದವರು ಭಾರತ್ ಮಾತಾ ಕೀ ಜೈ ಅಂದರು ಎಂದು ಸಮಾವೇಶದಲ್ಲಿದ್ದ ಕಾರ್ಯಕರ್ತರನ್ನು ಹುರಿದುಂಬಿಸಿದರು..
PublicNext
22/04/2022 08:32 pm