ಬೆಂಗಳೂರು: ಕರ್ನಾಟಕ ದಲ್ಲಿರೋದು 40% ಕಮಿಷನ್ ಸರ್ಕಾರ ದೆಹಲಿಯಲ್ಲಿರೋದು 0% ಕಮಿಷನ್ ಸರ್ಕಾರ ಅಂದ್ರೆ ಅಪ್ಪಟ ಪ್ರಾಮಾಣಿಕ ಸರ್ಕಾರ. ಇಂತಹ ಪ್ರಾಮಾಣಿಕ ಸರ್ಕಾರ ಮೊದಲು ದೆಹಲಿಯಲ್ಕಿ ರಚನೆ ಆಯ್ತು ಆಮೇಲೆ ಪಂಜಾಬ್ ನಲ್ಲಿ ಆಯ್ತು ಮುಂದಿನ ಸರದಿ ಕರ್ನಾಟಕದ್ದೇ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ವರಿಷ್ಟ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಕರ್ನಾಟಕ ರೈತಸಂಘ ಆಯೋಜಿಸಿದ್ದ ಬೃಹತ್ ರೈತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ದೆಹಲಿಯಲ್ಲಿ ಉಚಿತ ಶಿಕ್ಷಣ, ಉಚಿತ ವೈದ್ಯಕೀಯ ಚಿಕಿತ್ಸೆ ,ಉಚಿತ ನೀರು ಪೂರೈಕೆ, ಉಚಿತ ಕರೆಂಟ್ ಎಲ್ಲವನ್ನೂ ನೀಡುತ್ತಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ನಾವು ಪ್ರಾಮಾಣಿಕ ಸರ್ಕಾರ ನಡೆಸುತ್ತಿರೋದ್ರಿಂದ ಕರ್ನಾಟಕದಲ್ಲೂ ಇದೇ ರೀತಿ ಸರ್ಕಾರ ಬೇಕು ಅಂದ್ರೆ ನೀವು ಆಮ್ ಆದ್ಮಿಯನ್ನು ಬೆಂಬಲಿಸಿ ಎಂದು ಕರೆನೀಡಿದ್ರು. ರಾಜ್ಯ ರೈತಸಂಘ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ರಾಜ್ಯ ರೈತ ಸಂಘ ಸಂಪೂರ್ಣವಾದ ಬೆಂಬಲವನ್ನು ಆಮ್ ಆದ್ಮಿಪಕ್ಷಕ್ಕೆ ನೀಡುತ್ತಿರುವುದಾಗಿ ಘೋಷಿಸಿದ್ರು. ವೇದಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ಕರ್ನಾಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡ ಮಾಜಿ ಎಡಿಜಿಪಿ ಭಾಸ್ಕರ್ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
PublicNext
21/04/2022 07:12 pm