ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನರಿಗೆ ಉಚಿತ ಕೊಡುಗೆಗಳನ್ನ ನೀಡಲು ಕ್ರೆಜಿವಾಲ್ ಸರ್ಕಾರ ಸಾಲ ಮಾಡಿಲ್ಲ: ಭಾಸ್ಕರ್ ರಾವ್

ದೊಡ್ಡಬಳ್ಳಾಪುರ: ದೇಶ ಹಾಗೂ ರಾಜ್ಯದ ಜನತೆ ರಾಜಕೀಯ ಬದಲಾವಣೆ ಬಯಸಿದ್ದಾರೆ. ದೇಶಾದ್ಯಂತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಬಗ್ಗೆ ಭರವಸೆ ಮೂಡಿದೆ ಎಂದು ಎಎಪಿ ಮುಖಂಡ ಭಾಸ್ಕರ್ ರಾವ್ ಹೇಳಿದರು.

ಉಚಿತ ಕೊಡುಗೆಗಳು ದೇಶವನ್ನು ಅದೋಗತಿಗೆ ತರುತ್ತೆ ಮತ್ತು ಇವತ್ತಿನ ಶ್ರೀಲಂಕಾ ಪರಿಸ್ಥಿತಿ ಬರುತ್ತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಪ್ ಪಕ್ಷದ ಮುಖಂಡ ಭಾಸ್ಕರ್ ರಾವ್ ಕಳೆದ 7 ವರ್ಷಗಳಿಂದ ದೆಹಲಿಯಲ್ಲಿ ದೆಹಲಿಯಲ್ಲಿ ಕ್ರೆಜಿವಾಲ್ ಸರ್ಕಾರ ಜನರಿಗೆ ಉಚಿತ ಕೊಡುಗೆಗಳನ್ನ ಕೊಡುತ್ತಾಲೆ ಬಂದಿದ್ದಾರೆ. 200 ಯೂನಿಟ್ ವಿದ್ಯುತ್ ಮತ್ತು 20 ಸಾವಿರ ಲೀಟರ್ ನೀರು ಮತ್ತು ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಲಾಗುತ್ತಿದೆ. ಈ ಎಲ್ಲಾ ಉಚಿತ ಕೊಡುಗೆಗಳನ್ನ ನೀಡಲು ಕ್ರೆಜಿವಾಲ್ ಸರ್ಕಾರ ಸಾಲ ಮಾಡಿಲ್ಲ.

ಕರ್ನಾಟಕ ಸರ್ಕಾರ ಇವತ್ತು 7.5 ಲಕ್ಷ ಕೋಟಿ ಸಾಲದ ಹೊರೆ ಇದೆ, ಆದರೆ ಅರವಿಂದ್ ಕ್ರೆಜಿವಾಲ್ ಉಚಿತ ಕೊಡುಗೆ ನೀಡಲು ಸಾಲ ಮಾಡಿಲ್ಲ ಮತ್ತು ತೆರಿಗೆಯನ್ನು ಹೆಚ್ಚು ಮಾಡಿಲ್ಲ, ಆಗಾದ್ರೆ ಹಣವನ್ನ ಎಲ್ಲಿಂದ ತಂದ್ರು ಅನ್ನುವ ಪ್ರಶ್ನೆ ಬರುತ್ತೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು ಮತ್ತು ಸೋರಿಕೆಯನ್ನ ತಡೆಗಟ್ಟಿದ್ದರಿಂದ ಕಾಮಾಗಾರಿಗಳಲ್ಲಿ ಕೋಟಿ ಕೋಟಿ ಹಣವನ್ನ ಉಳಿಸಲಾಗಿದೆ ಈ ಹಣವನ್ನ ಸಾರ್ವಜನಿಕ ನೀಡಲಾಗುತ್ತಿದೆ ಎಂದು ಭಾಸ್ಕರ್ ರಾವ್ ತಿಳಿಸಿದ್ದರು.

ದೆಹಲಿ ರಾಜ್ಯದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಳೆದ ೭ ವರ್ಷಗಳಲ್ಲಿ ಮಾದರಿ ಆಡಳಿತ ನೀಡಿದ್ದಾರೆ. ನಿಜವಾದ ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ‌. ದ್ವೇಷ, ಜಾತಿ, ಧರ್ಮತೀತಾವಾಗಿ ಕೆಲಸ ಮಾಡಲಾಗುತ್ತದೆ. ಯುವಕರು ರಾಜಕೀಯಕ್ಕೆ ಬರಬೇಕು.ಪಂಜಾಬ್ ನಲ್ಲಿ ೯೨ ಮಂದಿ ಶಾಸಕರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದಿದ್ದಾರೆ ಇದು ಅರವಿಂದ್ ಕೇಜ್ರಿವಾಲ್ ಜನಪರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಏಪ್ರಿಲ್ ೨೧ಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಅರವಿಂದ್ ಕೇಜ್ರಿವಾಲ್ ಬರಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್ಪಿ ಮುಖಂಡರು ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಭಾಸ್ಕರ್ ರಾವ್ ಸಮ್ಮುಖದಲ್ಲಿ ಎಎಪಿ ಸೇರ್ಪಡೆಯಾದರು.

Edited By : PublicNext Desk
Kshetra Samachara

Kshetra Samachara

20/04/2022 10:49 pm

Cinque Terre

3.15 K

Cinque Terre

0

ಸಂಬಂಧಿತ ಸುದ್ದಿ