ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಳೆ ರೈತ ಸಮಾವೇಶ; ಸಿಲಿಕಾನ್ ಸಿಟಿಗೆ ದೆಹಲಿ ಸಿಎಂ ಕೇಜ್ರಿವಾಲ್ ಆಗಮನ

ದೇವನಹಳ್ಳಿ: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏ.21ರಂದು ರೈತ ಸಮಾವೇಶ ನಡೆಯಲಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಸಂಜೆ ದೇವನಹಳ್ಳಿ ಏರ್‌ಪೋರ್ಟ್ ಗೆ ಆಗಮಿಸಿದರು.

ಕೇಜ್ರಿವಾಲ್ ಅವರನ್ನು ಆಮ್ ಆದ್ಮಿ ಪಾರ್ಟಿ ದೇವನಹಳ್ಳಿ ತಾಲೂಕು ‌ಮುಖಂಡರಾದ ಕೆ.ಶಿವಪ್ಪ ನೇತೃತ್ವದ ಕಾರ್ಯಕರ್ತರು ಬರಮಾಡಿಕೊಂಡರು. ವಿಶೇಷವಾಗಿ ದೇವನಹಳ್ಳಿ ‌ಚಕ್ಕೋತಾ, ಹೂವು ನೀಡಿ ಸ್ವಾಗತ ಕೋರಲಾಯಿತು. ವಿಶೇಷ ಭದ್ರತೆ ಹಿನ್ನೆಲೆಯಲ್ಲಿ ಕೇಜ್ರಿವಾಲರು ಕಾರಿನಲ್ಲೇ ಹೂ- ಹಣ್ಣು ಸ್ವೀಕರಿಸಿ ಕಾರ್ಯಕರ್ತರಿಗೆ ನಮಸ್ಕರಿಸಿದರು.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ವಿಜೃಂಭಿಸಿದ AAP ದೇಶಾದ್ಯಂತ ತನ್ನ ಬಲ ವಿಸ್ತರಿಸಿಕೊಳ್ಳಲು ಮತ್ತು ಕಾಂಗ್ರೆಸ್ ಪಕ್ಷದ ಸ್ಥಾನ‌ ತುಂಬಲು ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಬೆಂಗಳೂರು ಭೇಟಿ ಕುತೂಹಲ ಕೆರಳಿಸಿದೆ.

Edited By :
PublicNext

PublicNext

20/04/2022 08:42 pm

Cinque Terre

38.01 K

Cinque Terre

3

ಸಂಬಂಧಿತ ಸುದ್ದಿ