ಯಲಹಂಕ: ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ರಾಜಾನುಕುಂಟೆ ಠಾಣೆ ವ್ಯಾಪ್ತಿಯ ಅರಕೆರೆ ಗ್ರಾಪಂನ ಬೈರಾಪುರದಲ್ಲಿ ಜಮೀನಿಗೆ ತೆರಳಲು ರಸ್ತೆಲಿ ಹಾಕಿದ್ದ ಫ್ಲೆಕ್ಸ್ ಅಡ್ಡಿಯಾಗ್ತಿತ್ತು. ಇದೀಗ ಫ್ಲೆಕ್ಸ್ ತೆರವು ರಾಜಕೀಯ ತಿರುವು ಪಡೆದಿದೆ.
ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ ಬರ್ತ್ ಡೇಗಾಗಿ ಬೈರಾಪುರ ಬಸ್ ನಿಲ್ದಾಣ ಮತ್ತು ಗ್ರಾಮದಲ್ಲೆಲ್ಲ ಫ್ಲೆಕ್ಸ್ ಹಾಕಲಾಗಿತ್ತು. ಆದರೆ, ತಿಂಗಳು ಕಳೆದರೂ ಫ್ಲೆಕ್ಸ್ ತೆಗೆಯದೆ ಜಮೀನಿಗೆ ತೆರಳಲು ಅಡ್ಡಿಯಾಗಿತ್ತು.
ಜಮೀನು ಮಾಲೀಕ ಅಶ್ವತ್ಥನಾರಾಯಣ ಅರಕೆರೆ ಗ್ರಾಪಂಗೆ ಜಮೀನಿಗೆ ತೆರಳಲು ಫ್ಲೆಕ್ಸ್ ಅಡ್ಡಿಯಾಗ್ತಿದೆ. ಆದ್ದರಿಂದ ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ರು. ಪಂಚಾಯ್ತಿ ರಾಜಾನುಕುಂಟೆ ಪೊಲೀಸರಿಗೆ ದೂರುನೀಡಿ, ಪೊಲೀಸರ ಸಮ್ಮುಖದಲ್ಲೇ ಫ್ಲೆಕ್ಸ್ ಸ್ಥಳಾಂತರಿಸಿದೆ.
ಉದ್ದೇಶಪೂರ್ವಕವಾಗಿ ಬೈರಾಪುರದ ವೆಂಕಟೇಶ್, ಮುನಿಕೃಷ್ಣಪ್ಪ ಹಾಗೂ ವಿಶ್ವ ಅವರು ಪುನೀತ್ ಹೆಸರಲ್ಲಿ ಫ್ಲೆಕ್ಸ್ ವಿಚಾರ ತಂದು ರಾಜಕೀಯ ಮಾಡಿ ತೊಂದರೆ ಮಾಡುತ್ತಿದ್ದಾರೆ. ಪುನೀತ್ ಬಗ್ಗೆ ಅಪಾರ ಗೌರವ ಇದೆ. ನನ್ನ ತೇಜೋವಧೆ ಮಾಡ್ತಿರುವ ವೆಂಕಟೇಶ್ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ ಅಂತಾರೆ ಬೈರಾಪುರ ಗ್ರಾಪಂ ಸದಸ್ಯ ಚನ್ನಪ್ಪ.
ಆದರೆ, ಬೈರಾಪುರದ ವೆಂಕಟೇಶ್ ಮಾತ್ರ ಪಂಚಾಯ್ತಿಗೆ ತದ್ವಿರುದ್ಧವಾಗಿ ಫೇಸ್ಬುಕ್, ವ್ಯಾಟ್ಸಪ್ ನಲ್ಲಿ ಫ್ಲೆಕ್ಸ್ ತೆರವುಗೊಳಿಸಿದ್ದು ತಪ್ಪು. ಇದು ಅಭಿಮಾನಿಗಳಿಗೆ ನೋವು ತಂದಿದೆ ಎಂದು ವೀಡಿಯೊ ಮಾಡಿ ಹಾಕಿದ್ದಾರೆ.
ಅದೇನೆ ಇರಲಿ, ಪಂಚಾಯ್ತಿಯೇ ಪೊಲೀಸರಿಗೆ ಫ್ಲೆಕ್ಸ್ ತೆರವುಗೊಳಿಸಲು ಮನವಿ ಮಾಡಿದ ದಾಖಲೆ ಇದೆ. ರಸ್ತೆ ಜಾಗವನ್ನು ಒತ್ತುವರಿ ಮಾಡಲು ಫ್ಲೆಕ್ಸ್ ಹುನ್ನಾರ ಅಂತಿದೆ ಅರಕೆರೆ ಗ್ರಾಮ ಪಂಚಾಯ್ತಿ. ಈ ಬಗ್ಗೆ ರಾಜಾನುಕುಂಟೆ ಪೊಲೀಸರೂ ಗ್ರಾಪಂ ಪರ ಬ್ಯಾಟ್ ಬೀಸಿದ್ದಾರೆ. ಅಪ್ಪು ಅವರಿಗೆ ಗೌರವ ಸೂಚಿಸೋಣ. ಆದರೆ, ಫ್ಲೆಕ್ಸ್- ಬ್ಯಾನರ್ ಹೆಸರಲ್ಲಿ ಅಗೌರವ ತೋರುವುದು ಬೇಡ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಸತ್ಯಾಂಶ ಹೊರ ಹಾಕಲಿ.
-ಸುರೇಶ್ ಬಾಬು Public Next ಯಲಹಂಕ
PublicNext
20/04/2022 10:37 am