ಮಹಾದೇವಪುರ: 'ಲಂಚ' ಪ್ರಪಂಚ ಹುಟ್ಟಿದಾಗಿನಿಂದಲೂ ಇದೆ. ಪ್ರಪಂಚ ಇರೋ ತನಕವೂ ಇರಲಿದೆ. ಆದರೆ, ಬಿಜೆಪಿಯಲ್ಲಿ ಹೆಚ್ಚಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.
ಅವರು ಮಹಾದೇವಪುರದ ವೈಟ್ ಫೀಲ್ಡ್ ನಲ್ಲಿ ನಾಳೆ ಅದ್ಧೂರಿಯಾಗಿ ಕಾಂಗ್ರೆಸ್ ಪಕ್ಷದಿಂದ ನಡೆಯಲಿರುವ ಅಂಬೇಡ್ಕರ್ ಜಯಂತ್ಯುತ್ಸವದ ಸಿದ್ಧತೆ ಪರಿಶೀಲನೆಯ ಬಳಿಕ ಮಾತನಾಡಿದರು.
40% ಲಂಚ ಪಡೆದ ಆರೋಪ ಎದುರಿಸುತ್ತಿರುವ ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದ ಅವರು, ಗುತ್ತಿಗೆದಾರರು ಲಂಚ ಕೊಡುವ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನ ಮಂತ್ರಿಗಳಿಗೆ ಪತ್ರ ಸಹ ಬರೆಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ! ಪ್ರಧಾನಿ ಮೋದಿಯವರು ಹೇಳೋದು ಒಂದು, ಮಾಡೋದು ಇನ್ನೊಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದ್ದು, ನಾಳೆ ಸಿಎಂಗೂ ಕೊಡುತ್ತೇವೆ ಎಂದರು.
PublicNext
13/04/2022 10:27 pm