ಬೆಂಗಳೂರು: ನಿನ್ನೆ ಬಿಟಿಎಂ ಲೇಔಟ್ ಕ್ಷೇತ್ರದ ಎಸ್.ಜಿ.ಪಾಳ್ಯ ವಾರ್ಡ್ ಪಾರ್ಕ್ ಗೆ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಮತ್ತು ಅವರ ತಂಡ ಭೇಟಿ ನೀಡಿತ್ತು. ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಎಸ್.ಜಿ.ಪಾಳ್ಯದ ಪಾರ್ಕ್‌ನ ಜಿಮ್ ಉಪಕರಣಗಳು ಒಡೆದು ಹೋಗಿವೆ ಎಂದು ಅನಿಲ್ ಶೆಟ್ಟಿ ಮತ್ತು ಅವರ ತಂಡ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾರ್ಕ್‌ನಲ್ಲಿರುವ ಜಿಮ್ ಉಪಕರಣಗಳನ್ನು ನಿರ್ವಹಣೆ ಮಾಡುತ್ತಿಲ್ಲ ಮತ್ತು ಸಾರ್ವಜನಿಕರು ದೂರು ನೀಡಿದ ನಂತರವೂ ಶಾಸಕರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅನಿಲ್ ಶೆಟ್ಟಿ ವೀಡಿಯೋದಲ್ಲಿ ಹೇಳಿದ್ದಾರೆ.
ಇಂದು ಬೆಳಗ್ಗೆ ಎಸ್.ಜಿ.ಪಾಳ್ಯ ಬಿಬಿಎಂಪಿ ಕಾರ್ಪೊರೇಟರ್ ಮಂಜುನಾಥ್, ಪಾರ್ಕ್‌ಗೆ ಭೇಟಿ ನೀಡಿ ಸಾರ್ವಜನಿಕರನ್ನೂ ಭೇಟಿ ಮಾಡಿ ಸಮಸ್ಯೆ ಕೇಳಿದ್ದಾರೆ. ಜಿಮ್ ಉಪಕರಣಗಳ ಬಗ್ಗೆ ಸಾರ್ವಜನಿಕರಿಂದ ಇದುವರೆಗೂ ಯಾವುದೇ ದೂರು ಬಂದಿಲ್ಲ.ಆದರೆ, ಈಗ ಇದನ್ನ ನೋಡಿದ್ದೇನೆ. ಶೀಘ್ರವೇ ಇದನ್ನ ಸರಿಪಡಿಸುತ್ತೇವೆ. ಅಧಿಕಾರಿಗಳಿಗೂ ತಿಳಿಸುತ್ತೇನೆ ಎಂದರು.
ಉದ್ಯಾನವನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಜಿಮ್ ಉಪಕರಣಗಳಲ್ಲಿ ಸ್ವಲ್ಪ ಸಮಸ್ಯೆ ಬಂದಿದೆ. ಆದರೆ ಯಾರೂ ನಮಗೆ ಈ ಬಗ್ಗೆ ಮೊದಲು ತಿಳಿಸಲಿಲ್ಲ. ಮತ್ತು ಅವರ ಸ್ವಂತ ಸರ್ಕಾರ ಮತ್ತು ಅವರ ಪಕ್ಷದ ಸಂಸದರು ಇರುವಾಗ, ಅವರು ಅವರಿಗೆ ಏಕೆ ತಿಳಿಸಲಿಲ್ಲ ಎಂದು ಎಸ್.ಜಿ.ಪಾಳ್ಯ ವಾಕರ್ಸ್ ಅಸೋಸಿಯೇಷನ್ ಸದಸ್ಯರು ಪಬ್ಲಿಕ್ ನೆಕ್ಸ್ಟ್ ಎದುರು ಕೇಳಿದ್ದಾರೆ.
ಕ್ಷೇತ್ರದ ಶಾಸಕರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬೇರೆ ಮಾತು ಇಲ್ಲ. ಆದರೆ ಅಭಿವೃದ್ಧಿಯಾಗಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುವುದು ಒಳ್ಳೆಯದಲ್ಲ ಎಂದು ಎಸ್.ಜಿ.ಪಾಳ್ಯದ ನಿವಾಸಿಗಳು ಹೇಳ್ತಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವೀಡಿಯೋ ವಾರ್ ಏನೇ ಇರಲಿ, ಸಾರ್ವಜನಿಕರು ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಬಯಸುತ್ತಾರೆ.
ನವೀನ್, ಪಬ್ಲಿಕ್ ನೆಕ್ಸ್ಟ್,
ಬೆಂಗಳೂರು.
PublicNext
11/04/2022 04:35 pm