ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾನು ಕೊಲ್ಲುವುದನ್ನೇ ಸಮರ್ಥಿಸಿಕೊಳ್ಳುವ ನೀಚ ರಾಜಕಾರಣ ಮಾಡೋದಿಲ್ಲ !

ಬೆಂಗಳೂರು: ಕೊಲ್ಲುವುದನ್ನೇ ಸಮರ್ಥಿಸಿಕೊಳ್ಳುವ ನೀಚ ರಾಜಕೀಯ ನಾನು ಮಾಡುವುದಿಲ್ಲ. ಮಸೀದಿ ಯಲ್ಲಿ ಆಜಾನ್ ಗೆ ಧ್ವನಿ ವರ್ಧಕ ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆ ಆಗಲಿ.ನಾನು ಮಸೀದಿ ವಿರುದ್ಧವಾಗಲಿ ದೇವಸ್ಥಾನಗಳ ಪರವಾಗಿ ಆಗಲಿ ಇಲ್ಲಾ. ನಾನೇನಿದ್ರೂ ನ್ಯಾಯಾಲಯದ ಪರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚಣೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ ಸಂಬಂಧ ನ್ಯಾಯಾಲಯದ ಆದೇಶದ ಪಾಲನೆ ಆಗಲಿ.

ಈ ವಿಚಾರವಾಗಿ ಟೀಕೆ ಮಾಡುವ ಇತರೇ ಪಕ್ಷಗಳು ಕೋಟ್೯ ಆದೇಶದ ಪರವಾಗಿದ್ದಾರೋ ಅಥವಾ ಒಂದು ಸಮುದಾಯದ ಪರವಾಗಿ ಇದ್ದಾರೋ ಎನ್ನುವುದನ್ನು ಸ್ಪಷ್ಟಪಡಿಸಲಿ. ಆಗ ಗೊತ್ತಾಗುತ್ತದೆ ಮತಾಂಧತೆಯ ಭೂತ ಯಾರಿಗೆ ಹೊಕ್ಕಿದೆ ಎಂಬುದು. ದೇಶ ಸುರಕ್ಷಿತವಾಗಿದ್ರೆ ಮಾತ್ರ ಬದುಕು ಕಟ್ಟಿಕೊಳ್ಳಲು ಆಗುತ್ತದೆ. ಅಪಘಾನಿಸ್ಥಾನದ ತರ ಆದ್ರೆ ಯಾರು ಇನ್ವೆಸ್ಟರ್ ಬರ್ತಾರೆ ? ನಾನು ಕೊಲ್ಲುವುದನ್ನೇ ಸಮರ್ಥನೆ ಮಾಡಿಕೊಳ್ಳುವ ನೀಚ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

Edited By : Nagesh Gaonkar
PublicNext

PublicNext

06/04/2022 02:17 pm

Cinque Terre

25.71 K

Cinque Terre

0

ಸಂಬಂಧಿತ ಸುದ್ದಿ