ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಾನ ಸೌಧದಲ್ಲಿ ಡಾ. ಬಾಬು ಜಗಜೀವನರಾಮ್ ಅವರ 115 ನೇ ಜನ್ಮದಿನಾಚರಣೆ

ಬೆಂಗಳೂರು: ಹಸಿರುಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 115 ನೇ ಜನ್ಮದಿನಾಚರಣೆಯನ್ನು ಇಂದು ವಿಧಾನ ಸೌಧದಲ್ಲಿ ಆಚರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ. ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ನಂತರ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಾಬು ಜಗಜೀವನ ರಾಂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ- ಪಂಗಡದ ಸಮುದಾಯದವರಿಗೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದರು.

ಸಮುದಾಯದವರ ಭೂ ಒಡೆತನ ಹೆಚ್ಚಿಸಲು ಕ್ರಮ ಭೂ ಒಡೆತನ ಯೋಜನೆಯಡಿ ಭೂ ಖರೀದಿ‌ ಮೊತ್ತವನ್ನು‌ 15 ಲಕ್ಷ ರೂ.ನಿಂದ 20,0000 ರೂ.ಗೆ ಹೆಚ್ಚಳ‌ ಕುಟೀರ‌ ಜ್ಯೋತಿ ಯೋಜನೆಯಡಿ 40 ಯುನಿಟ್ ನಿಂದ 75 ಯುನಿಟ್ ವರೆಗೆ ಉಚಿತ ವಿದ್ಯುತ್ ಚ್ಛಕ್ತಿ ನೀಡಲು ನಿರ್ಧಾರ ಸಮುದಾಯದವರು ಮನೆ ನಿರ್ಮಿಸಲು 1.75 ಲಕ್ಷದಿಂದ 2,00,000 ರೂ. ವರೆಗೆ ಸಬ್ಸಿಡಿ ಕೊಡಲು ತೀರ್ಮಾನ ಹಾಗೂ ತಾಲೂಕಿಗೊಂದು ಬಾಬು ಜಗಜೀವನ್ ರಾಂ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಪ್ರಾರಂಭಿಸಲು ನಿರ್ಧಾರ ಕೈಗೊಂಡಿರುವುದಾಗಿ ಘೋಷಿಸಿದರು. ಸಮಾಜಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ ಪಾಟೀಲ್ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

05/04/2022 07:21 pm

Cinque Terre

2.67 K

Cinque Terre

0

ಸಂಬಂಧಿತ ಸುದ್ದಿ