ಬೆಂಗಳೂರು: ಬಿ.ಬಿ.ಎಂ.ಪಿ.ರಾತ್ರೋರಾತ್ರಿ ಬಜೆಟ್ ಮಂಡನೆ ಮಾಡಿದೆ. ಮಾತ್ರವಲ್ಲದೆ ಈ ಬಜೆಟ್ ಲೋಪದೋಷಗಳಿಂದ ಕೂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹೇಳಿದೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ 83 ರಿಂದ 88 ರವರಗೆ ಪಾಲಿಕೆ ಸದಸ್ಯನಾಗಿದ್ದೇ 35ವರ್ಷ ಶಾಸಕನಾಗಿದ್ದೇ 40ಪಾಲಿಕೆ ಬಜೆಟ್ ಮಂಡನೆ ನೋಡಿದ್ದೇನೆ.
ಪಾಲಿಕೆ ಬಜೆಟ್ ಮಂಡನೆಯಲ್ಲಿ ಪೂರ್ವಭಾವಿಯಾಗಿ ಸಂಘಸಂಸ್ಥೆಗಳ,ಅಧಿಕಾರಿಗಳು,ಜನರ ಅಭಿಪ್ರಾಯ ಸಂಗ್ರಹಿಸಿ ಬಜೆಟ್ ಮಂಡನೆ ಮಾಡುತ್ತಿದ್ದರು ಅದರೆ ಇಂದು ಆನ್ ಲೈನ್ ಮೂಲಕ ರಾತ್ರೋರಾತ್ರಿ ಮಂಡನೆ ಮಾಡಿ,ಪಾಲಿಕೆ ಬಜೆಟ್ ಮಂಡನೆ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದೆ.
ಆನ್ ಲೈನ್ ಮತ್ತು ಅಫ್ ಲೈನ್ ಮೂಲಕ 150ಕೋಟಿ ಅಷ್ಟು ಡಬಲ್ ಬಿಲ್ಲು ಪಾವತಿ ಮಾಡಲಾಗಿದೆ.
ಮುಖ್ಯಮಂತ್ರಿಗಳು ಈ ಬಜೆಟ್ ರದ್ದುಗೊಳಿಸಿ,ಪುನರ್ ಪರಿಶೀಲಿಸಿ ವಾಸ್ತವಿಕ ಬಜೆಟ್ ಮಂಡಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ, ಜೆ.ಹುಚ್ಚಪ್ಪ, ಜಿ.ಪದ್ಮಾವತಿ, ಗಂಗಾಬಿಕೆ ಮಲ್ಲಿಕಾರ್ಜುನ್,ಸಂಪತ್ ರಾಜ್ ,ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜು,ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ಉಪಸ್ಥಿತರಿದ್ದರು.
Kshetra Samachara
04/04/2022 10:43 pm