ಏಪ್ರಿಲ್ ಒಂದು ಸಿದ್ದಗಂಗಾ ಶ್ರೀಗಳ ಜಯಂತಿ ದಿನ. ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯಲ್ಲಿ ಭಾಗಿಯಾಗಲು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ಪಕ್ಷದ ಎಲ್ಲಾ ಗಣ್ಯಾತಿಗಣ್ಯರು ರಾಹುಲ್ ಗಾಂಧಿಯನ್ನು ಬರಮಾಡಿಕೊಂಡರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಎಲ್ಲರ ಸಮಕ್ಷದಲ್ಲಿ ರಾಹುಲ್ ಮದ್ಯಾಹ್ನ2-15ಕ್ಕೆ ಆಗಮಿಸಿದರು.
ಏರ್ಪೋರ್ಟ್ ನ ತಾಜ್ ಹೋಟೆಲ್ ನಲ್ಲಿ ವಿಶ್ರಮಿಸಿ ನಂತರ ದೇವನಹಳ್ಳಿಗೆ ತೆರಳಲಿದ್ದಾರೆ. ದೇವನಹಳ್ಳಿ ಸ್ಟೇಜ್ ಕಾರ್ಯಕ್ರಮ ಮುಗಿಸಿ ಕಾರಿನ ಮುಖಾಂತರ ತುಮಕೂರಿಗೆ ರಾಹುಲ್ ಗಾಂಧಿ ತೆರಳಲಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖಂಡರು ಸಹ ರಾಹುಲ್ ಗಾಂಧಿ ಜೊತೆ ತೆರಳುವರು ಎನ್ನಲಾಗ್ತಿದೆ.
Kshetra Samachara
31/03/2022 04:26 pm