ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಸತಿ ರಹಿತ ಬಡವರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ಜಾಥಾ

ಕೆ.ಆರ್.ಪುರ: ವಸತಿ ರಹಿತ ಬಡವರಿಗೆ ಸೂರು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಿಪಬ್ಲಿಕ್ ಸೇನಾ ಕಾರ್ಯಕರ್ತರು ಕಾಟಂನಲ್ಲೂರು ಕ್ರಾಸ್‌ ನಿಂದ ಕೆಆರ್ ಪುರ ತಾಲೂಕು ಕಚೇರಿವರೆಗೂ ಜಾಥಾ ನಡೆಸಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಅವರು ಬೆಂಗಳೂರು ಪೂರ್ವ ತಾಲೂಕು ‌ಮಹದೇವಪುರ ಕ್ಷೇತ್ರ ಇಡೀ ರಾಜ್ಯದಲ್ಲಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆದಿದೆ. ಕ್ಷೇತ್ರದಲ್ಲಿ ಸಾವಿರಾರು ಎಕರೆ ಸರ್ಕಾರಿ ಜಾಗವನ್ನೂ ಹೊಂದಿದೆ. ಆದರೆ ಸರ್ಕಾರಿ ಜಮೀನು ಬಂಡವಾಳ ಶಾಹಿ ಮತ್ತು ಹೊರ ರಾಜ್ಯದ ಬಿಲ್ಡರ್ ಗಳ ಪಾಲಾಗುತ್ತಿದೆ. ಅಧಿಕಾರಿಗಳು ಇವರಿಗೆ ಕೈಜೋಡಿಸಿದ್ದಾರೆ. ರಾತ್ರೋರಾತ್ರಿ ಭೂಮಿ ಒತ್ತುವರಿಯಾಗುತ್ತಿದ್ದರೂ ಕ್ರಮಕ್ಕೆ ಮುಂದಾಗದೆ ಭೂಮಿ ಪರಭಾರೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಅನೇಕ ವರ್ಷಗಳಿಂದ ಈ ಭಾಗದಲ್ಲಿ ವಾಸ ಮಾಡುತ್ತಿರುವ ಬಡವರಿಗೆ 30x20 ನಿವೇಶನ ನೀಡದೆ ಅನ್ಯಾಯ ಮಾಡಲಾಗಿದೆ. ಹಲವು ವರ್ಷಗಳಿಂದ ರೈತರು ಗ್ರಾಮಸ್ಥರು ಹಲವಾರು ಸಂಘಟನೆಗಳು ಹೋರಾಟ ನಡೆಸಿ ಉಳಿಸಿಕೊಂಡಿರುವ ಸರ್ಕಾರಿ ಗೋಮಾಳದ ಜಮೀನು,ಬಂಡಿ, ರಾಜಕಾಲುವೆ,ಖರಾಬು ಭೂಮಿಯನ್ನು ಉಳಿಸಿಕೊಳ್ಳಬೇಕಾದ ಅಧಿಕಾರಿಗಳು ಸರ್ಕಾರಿ ಮಾರಾಟ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.ಹಲವು ವರ್ಷಗಳಿಂದ ನೆಲೆಕೊಂಡಿರುವ ಬಡವರು ನಿವೇಶನ ಇಲ್ಲದೆ ಪರಾದಾಡುವಂತಾಗಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ನಮ್ಮನ್ನು ಆಳಿದ ಎಲ್ಲಾ ಪಕ್ಷಗಳು ಓಟ್ ಬ್ಯಾಂಕ್ ಗಾಗಿ ಬಳಸಿಕೊಂಡಿದೆ. ಕನಿಷ್ಠ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿ ವಿಫಲವಾಗಿವೆ. ಸರ್ಕಾರ ಕೂಡಲೇ ವಸತಿ ರಹಿತ ಬಡವರಿಗೆ ನಿವೇಶನ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Edited By : Manjunath H D
Kshetra Samachara

Kshetra Samachara

30/03/2022 11:12 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ