ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು; ಮುಂದುವರಿದ ಬ್ಯಾಂಕ್ ಮುಷ್ಕರ, ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಬೆಂಗಳೂರು; ಇಂದು ಸಹ ರಾಷ್ಟ್ರ ವ್ಯಾಪಿ ಬ್ಯಾಂಕ್ ಗಳು ಬಂದ್ ಆಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳಿಂದ 2 ದಿನಗಳ ಮುಷ್ಕರಕ್ಕೆ ಕರೆ‌ ನೀಡಲಾಗಿದ್ದು,ಮಾರ್ಚ್ 28 ಮತ್ತು 29ರಂದು ಸಾರ್ವತ್ರಿಕ ಮುಷ್ಕರ ನಡೆಯುತ್ತಿದೆ.

ನಿನ್ನೆ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಹಂತದಲ್ಲಿ ಪ್ರತಿಭಟನೆ ನಡೆದಿತ್ತು. ‌ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯತ್ತಲ್ಲಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ

ಸಾವಿರಾರು ಪ್ರತಿಭಟನಾಕಾರರು ಭಾಗಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಫ್ರೀಡಂ ಪಾರ್ಕ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರಮುಖ ಬೇಡಿಕೆಗಳು ಹೀಗಿವೆ

1.ಕಾರ್ಪೊರೇಟ್ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದು.

2.ರೈತರು ಮತ್ತು ಕೂಲಿಕಾರರನ್ನು ರಕ್ಷಿಸುವಂತೆ ಒತ್ತಾಯ.

3.ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ರದ್ಧತಿ.

4.ಬೆಲೆ ಏರಿಕೆ ನಿಯಂತ್ರಣಕ್ಕಾಗಿ ರೈತ ಹಾಗೂ ಕೂಲಿಕಾರರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ.

5.26 ಸಾವಿರ ರೂಪಾಯಿ ಸಮಾನ ಕನಿಷ್ಠ ವೇತನ.

6.ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು.

7.ಅಂಗನವಾಡಿ, ಬಿಸಿಯೂಟ ಮತ್ತು ಕಾರ್ಯಕರ್ತರನ್ನು ಕೆಲಸಗಾರರೆಂದು ಗುರುತಿಸಬೇಕು.

8.ನ್ಯಾಯಬದ್ಧ ಸವಲತ್ತುಗಳನ್ನು ನೀಡಬೇಕು ಸೇರಿದಂತೆ ನಾನಾ ಅಂಶಗಳನ್ನು ಇಟ್ಟುಕೊಂಡು ಪ್ರತಿಭಟನೆ

ಮಾಡಲಾಗುತ್ತಿದೆ.

Edited By :
PublicNext

PublicNext

29/03/2022 06:53 pm

Cinque Terre

25.22 K

Cinque Terre

1

ಸಂಬಂಧಿತ ಸುದ್ದಿ