ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಮುಂದಿನ ಚುನಾವಣೆಯಲ್ಲಿ ಬಿಟಿಎಂ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ"

ಬೆಂಗಳೂರು: ಬಿಜೆಪಿ ಯುವ ಮುಖಂಡ ಅನಿಲ್ ಶೆಟ್ಟಿ ಇಂದು ಬಿಟಿಎಂ ಲೇಔಟ್ ನಿವಾಸಿಗಳೊಂದಿಗೆ ಜನಸಂಪರ್ಕ ಸಭೆ ನಡೆಸಿದರು.

ಪ್ರತಿವಾರದಂತೆ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಮೇಸ್ತ್ರಿ ಪಾಳ್ಯದ ನಿವಾಸಿಗಳು ಪಾಲ್ಗೊಂಡಿದ್ದರು. ಈ ವೇಳೆ ಸಾರ್ವಜನಿಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನ ಹಂಚಿಕೊಂಡರು.

ಸ್ಥಳೀಯರ ಮಾತುಗಳನ್ನ ಆಲಿಸಿದ ಬಳಿಕ ಮಾತನಾಡಿದ ಅನಿಲ್ ಶೆಟ್ಟಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ತಮ್ಮ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದ್ದು, ಜನರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಗುರುವಾರ ಅನಿಲ್ ಶೆಟ್ಟಿ ಕೋರಮಂಗಲ ಕ್ಷೇತ್ರದ ಜನರೊಂದಿಗೆ ಕೂಡ ಜನಸಂಪರ್ಕ ಸಭೆ ನಡೆಸಿದ್ದರು.

- ನವೀನ್, 'ಪಬ್ಲಿಕ್ ನೆಕ್ಸ್ಟ್' ಬೆಂಗಳೂರು

Edited By : Shivu K
Kshetra Samachara

Kshetra Samachara

25/03/2022 05:43 pm

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ