ಬೆಂಗಳೂರು: ಹಿಜಾಬ್ ತೀರ್ಪು ವಿರೋಧಿಸಿ ಮಾತನಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ತಮಿಳುನಾಡಿನ ಮುಸ್ಲಿಂ ಸಂಘಟನೆ ಕಾರ್ಯಕರ್ತ ಜಡ್ಜ್ ವಿರುದ್ಧ ಜೀವ ಬೆದರಿಕೆ ಹೇಳಿಕೆ ನೀಡಿದ್ದಾನೆ. ಆತ ಈಗಾಗ್ಲೆ ತಮಿಳುನಾಡಿನಲ್ಲಿ ಅರೆಸ್ಟ್ ಆಗಿದ್ದಾನೆ. ಬಾಡಿ ವಾರೆಂಟ್ ಮೇಲೆ ಕರೆತಂದು ವಿಚಾರಣೆ ಮಾಡಬೇಕು. ಆತ ಸಿಜೆ ಅವರ ಪ್ರವಾಸದ ಬಗ್ಗೆಯೂ ಉಲ್ಲೇಖಿಸಿ ಮಾತನಾಡಿದ್ದಾನೆ.
ಈಗಾಗಲೇ ದೂರು ದಾಖಲಾಗಿದ್ದು, ಅದೇ ಕೇಸ್‌ನಲ್ಲಿ ಈ ದೂರನ್ನು ಸೇರಿಸಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಮುತಾಲಿಕ್ ಮನವಿ ಸಲ್ಲಿಸಿದರು.
PublicNext
21/03/2022 06:04 pm