ಬೆಂಗಳೂರು - ರಾಜಧಾನಿ ಬೆಂಗಳೂರಿನಲ್ಲಿ ಕಳಪೆ ಕಾಮಗಾರಿಗಳು ಸದ್ದು ಮಾಡ್ತಿವೆ. ಬಿಟಿಎಂ ಲೇಔಟ್ ವಿಧಾನ ಸಭಾ ಕ್ಷೇತ್ರದ ಡಾಲರ್ ಸ್ಕೀಮ್ 36ನೇ ರಸ್ತೆಯ ಡಾಂಬರೀಕರಣ, ಕಳಪೆ ಗುಣಮಟ್ಟದಿಂದ ಕೂಡಿದೆ. ಡಾಂಬರ್ ಹಾಕಿ 15 ದಿನದಲ್ಲಿ ಕಿತ್ತು ಬಂದಿದೆ ಎಂದು ಬಿಜೆಪಿ ಆರೋಪಿಸಿದೆ. ರಾಮಲಿಂಗಾ ರೆಡ್ಡಿ ಪ್ರತಿನಿಧಿಸುವ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 15 ದಿನಗಳ ಹಿಂದೆ ಡಾಂಬರೀಕರಣಗೊಂಡ ರಸ್ತೆಗಳು ಮತ್ತೆ ಹಾಳಾಗಿದ್ದು, ಅತ್ಯಂತ ಕಳಪೆ ಕಾಮಗಾರಿ ನಡೆದಿರುವ ಕುರಿತು ಬಿಟಿಎಂ ಕ್ಷೇತ್ರದ ಯುವ ಮುಖಂಡರು, ರಾಜ್ಯ ಬಿಜೆಪಿ ಯುವ ಮೋರ್ಚಾ ಖಜಾಂಚಿ ಅನಿಲ್ ಶೆಟ್ಟಿ ದೂರಿದ್ದಾರೆ.
PublicNext
15/03/2022 02:22 pm