ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಕ್ಕು ಪತ್ರಕ್ಕಾಗಿ ಗ್ರಾಮಸ್ಥರಿಂದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

ಆನೇಕಲ್: ಒಂದು ಕಡೆ ರಾಜ್ಯ ಸರ್ಕಾರ ರೈತರ ಮನೆ ಬಾಗಿಲಿಗೆ ದಾಖಲಾತಿ ಒದಗಿಸುವ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ಪೂರೈಸಲು ಈ ಯೋಜನೆ ತರಲಾಗುತ್ತಿದೆ. ಆದರೆ ಇಲ್ಲೊಂದು ಕಡೆ ಸುಮಾರು 40 ವರ್ಷಗಳಿಂದ ವಾಸಮಾಡುವ ಮನೆಗಳಿಗೆ ಹಕ್ಕುಪತ್ರ ನೀಡದೇ ಸತಾಯಿಸಿ ಕೇವಲ ಕಣ್ಣೊರೆಸುವ ತಂತ್ರ ಅನುಸರಿಸಿದ್ದಾರೆ ಎಂದು ತಹಶೀಲ್ದಾರ್ ಕಚೇರಿಗೆ ಊರಿನ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಹೀಗೆ ಬೇಕೇ ಬೇಕು.. ನ್ಯಾಯ ಬೇಕು.. ಎಂದು ಘೋಷಣೆ ಹಾಕುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಆನೇಕಲ್ ತಹಶೀಲ್ದಾರ್ ಕಚೇರಿ ಎದುರು. ಆನೇಕಲ್ ಪಟ್ಟಣದ ಕುಂಬಾರಹಳ್ಳಿ ಗ್ರಾಮದ ನಿವಾಸಿಗಳು ಸುಮಾರು 40 ವರ್ಷಗಳಿಂದ ವಾಸವಾಗಿದ್ದು ಹಕ್ಕು ಪತ್ರಗಳನ್ನು ನೀಡದ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯವನ್ನು ಖಂಡಿಸಿ ಇಂದು ತಾಲೂಕು ಕಚೇರಿಯೆದುರು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಇನ್ನು ಈ ಗ್ರಾಮದಲ್ಲಿ ಸುಮಾರು 70ರಿಂದ 100 ಮನೆಗಳಿದ್ದು ಸರ್ವೆ ನಂಬರ್ 19ರಲ್ಲಿ ಗೋಮಾಳ ಜಾಗದಲ್ಲಿ 4ಎಕರೆ 20ಗುಂಟೆ ಜಾಗ ಇದೆ. ಅದರಲ್ಲಿ 2ಎಕರೆ ಜಾಗ ನಿರಾಶ್ರಿತರಿಗೆ ಪಂಚಾಯತಿಗೆ ಹಸ್ತಾಂತರ ಮಾಡಿತ್ತು.. ಆ ಜಾಗದಲ್ಲಿ ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ ಆದರೆ ಹಕ್ಕುಪತ್ರವನ್ನು ಕೊಟ್ಟಿಲ್ಲ.. 94ಸಿ ಅಕ್ರಮ ಸಕ್ರಮ ಮೂಲಕ ಹಕ್ಕು ಪತ್ರ ಕೊಡುವ ಅವಕಾಶ ಇದ್ದರೂ ಕೂಡ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದಿಂದ ಹಕ್ಕು ಪತ್ರ ಸಿಗ್ಲಿಲ್ಲ ಅನ್ನೋದು ಆರೋಪ ಕೇಳಿಬಂದಿದೆ..

ಇನ್ನು ಊರಿನ ಗ್ರಾಮಸ್ಥರು ಹಕ್ಕುಪತ್ರದ ವಿಚಾರವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೂ ಕೂಡ ಯಾವುದೇ ಪ್ರಯೋಜನವಿಲ್ಲ. ಇದೇ ವೇಳೆ ಮಹಿಳೆಯೊಬ್ಬರು ಮಾತನಾಡಿ ಎಲ್ಲಕಡೆ ಎಲ್ಲ ದಾಖಲಾತಿಗಳನ್ನು ನೀಡಿದರೂ ಸಹ ನಮಗೆ ಇದುವರೆಗೂ ಯಾವುದೇ ಹಕ್ಕುಪತ್ರ ಬಂದಿಲ್ಲ. ಮತ್ತೆ ನಾವು ವಾಸ ಮಾಡುವ ಜಾಗದಲ್ಲಿ ಹೆಚ್ಚು ಕಡಿಮೆಯಾಗಿ ಮನೆ ಕೆಡವಿದರೆ ನಾವು ಎಲ್ಲಿ ಜೀವನ ಮಾಡಬೇಕು!? ಬಡವರ ಕಷ್ಟಕ್ಕೆ ಸ್ಪಂದಿಸದಿದ್ದೆರೆ ಸರ್ಕಾರ ಯಾಕೆ ಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಹಲವು ಬಾರಿ ಪೂರಕ ದಾಖಲೆಗಳನ್ನು ಕೊಟ್ಟರೂ ಸಹ ಅಧಿಕಾರಿಗಳು ಬಲಾಢ್ಯರ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಬಡವರಿಗೆ ನ್ಯಾಯ ಕೊಡಿಸುತ್ತಾರಾ? ಅನ್ನೋದನ್ನ ಕಾದುನೋಡಬೇಕಾಗಿದೆ..

ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್, ಆನೇಕಲ್

Edited By : Nagesh Gaonkar
PublicNext

PublicNext

10/03/2022 07:43 pm

Cinque Terre

51.48 K

Cinque Terre

0

ಸಂಬಂಧಿತ ಸುದ್ದಿ