ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾದಯಾತ್ರೆ ಕುರಿತು ಇದು ವೇಟ್ ಲಾಸ್ ಮಾಡುವ ಯಾತ್ರೆ ಎಂದು ಲೇವಡಿ ಮಾಡಿದ್ದರು.ಹೀಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಯತ್ನಾಳ್ ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ಕೊಡ್ತಿದ್ದಾರೆ. ಮಾಡೋಕೆ ಕೆಲಸ ಇಲ್ಲ ಹೀಗಾಗಿ ಹೀಗೆಲ್ಲಾ ಹೇಳ್ತಿದ್ದಾರೆ. ಅಲ್ಲದೆ ಅವರ ಹೇಳಿಕೆಗೆ ಮಹತ್ವ ಇಲ್ಲ ಬಿಡಿ ಎಂದಿದ್ದಾರೆ. ಅಲ್ಲದೆ ಪಬ್ಲಿಕ್ ನೆಕ್ಸ್ಟ್ ಪ್ರಶ್ನೆಯ ಒಂದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದೊಮ್ಮೆ ತಡಬಡಾಯಿಸಿದ್ರು.
ಮೇಕೆದಾಟು ಡಿಪಿಆರ್ ಹೇಗೆ ಸಿದ್ಧವಾಯಿತು? ಕೇಂದ್ರೀಯ ಜಲ ಆಯೋಗದ ಮೂಲಕ ಆಗಿದ್ದೀಯಾ? ಎಂದಿದ್ದೇ ತಡ, ಲಕ್ಷ್ಮೀ ಹೆಬ್ಬಾಳ್ಕರ್ ಅದೆಲ್ಲಾ ನನಗೆ ಗೊತ್ತಿಲ್ಲ ಎಂದುಬಿಟ್ರು.
PublicNext
01/03/2022 11:13 pm