ಕಳೆದ ಸಲ ದೇವನಹಳ್ಳಿ ಪುರಸಭೆಗೆ ನಡೆದ ಚುನಾವಣೆಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಆಗ ಜೆಡಿಎಸ್ & ಕಾಂಗ್ರೆಸ್ ಒಮ್ಮತದೊಂದಿಗೆ 14 ತಿಂಗಳ ಕಾಲ ಅಧ್ಯಕ್ಷ & ಉಪಾಧ್ಯಕ್ಷ ಗಾದಿಯನ್ನು ಪರಸ್ಪರ ಇಬ್ಬರು ಒಂದೊಂದು ಅವಧಿಗೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದವು.
ಕಳೆದ ಬಾರಿ ಅಧ್ಯಕ್ಷ ಪಟ್ಟ ಕಾಂಗ್ರೆಸ್ ಗೆ ಒಲಿದಿದ್ದರೆ, ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೀಗ ಒಪ್ಪಂದದಂತೆ ಅಧ್ಯಕ್ಷ ಗಾದಿ 13ನೇ ವಾರ್ಡ್ ನ JDS ಪಕ್ಷದ ಗೋಪಮ್ಮ ಅವರಿಗೆ ಒಲಿದಿದೆ. ಉಪಾಧ್ಯಕ್ಷ ಪಟ್ಟ 2ನೆ ವಾರ್ಡ್ ಕಾಂಗ್ರೆಸ್ ನ ಗೀತಾ ಅವರಿಗೆ ದಕ್ಕಿದೆ.
23 ಸ್ಥಾನಗಳ ಸಂಖ್ಯಾಬಲದ ದೇವನಹಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್ 8 ಸ್ಥಾನ ಒಲಿಸಿಕೊಂಡಿತ್ತು. 7 ಸ್ಥಾನಕ್ಕೆ JDS ತೃಪ್ತಿ ಪಟ್ಟಿತ್ತು. BJP 2 , BSP 2 ಸ್ಥಾನ, 8 ಸ್ಥಾನ ಪಕ್ಷೇತರರು ಪಡೆದಿದ್ದರು.
Kshetra Samachara
26/02/2022 10:50 am