ಬೆಂಗಳೂರು:ದಲಿತ ಸಂಘಟನೆಗಳು ನಾಳೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರು ಮೆಜೆಸ್ಟಿಕ್ ಮತ್ತು ಸುತ್ತ-ಮುತ್ತಲ ಪ್ರದೇಶದಲ್ಲಿ ವಾಹಸ ಸಂಚಾರಕ್ಕೆ ಅಡಚಣೆ ಆಗಲಿದೆ.
ಬೆಳಗ್ಗೆ 10 ಗಂಟೆಗೇನೆ ಪ್ರತಿಭಟನೆ ಶುರು ಆಗುತ್ತಿದೆ.ರೈಲು ನಿಲ್ದಾಣ ಮತ್ತು ಫ್ರೀಡಂ ಪಾರ್ಕ್ ನಡುವೆ ಇರೋ ಜಂಕ್ಷನ್ ಗಳನ್ನ ಹಾದು ಹೋಗಲಿದೆ.
ರಾಜ್ಯದ ವಿವಿಧ ಭಾಗದಿಂದಲೇ ಜನರು ಪ್ರತಿಭಟನೆಯಲ್ಲಿ ಭಾಗಿ ಆಗಲಿದ್ದಾರೆ. ಅರಮನೆ ಮೈದಾನದ ಗೇಟ್ ನಂಬರ್-2 ಮತ್ತು 3 ನೇ ಗೇಟ್ ನಲ್ಲಿ ಬೆಂಗಳೂರಿನ ಹೊರವಲಯದಿಂದ ಬರೋ ವಾಹನಗಳಿಗೆ ನಿಲ್ಲುವ ವ್ಯವಸ್ಥೆ ಮಾಡಲಾಗಿದೆ.
PublicNext
19/02/2022 10:48 pm