ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೂ ಹಲವಡೆ ಹಿಜಾಬ್ ಧರಿಸಿಕೊಂಡು ಕೆಲವ್ರು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಅದರಂತೆ ಇಂದು ಹಿಂದೂಪರ ಸಂಘಟನೆಗಳು ಬೆಂಗಳೂರು ಡಿಸಿಗೆ ಮನವಿ ಸಲ್ಲಿಸಿದ್ದಾರೆ.
ಕೋರ್ಟ್ ಮಧ್ಯಂತರ ಆದೇಶ ಪಾಲಿಸದವರ ಮೇಲೆ ಕ್ರಮಕ್ಕೆತೆಗೆದುಕೊಳ್ಳಿ ಅಂತಲೂ ಆಗ್ರಹಿಸಿದ್ದಾರೆ. ಶ್ರೀರಾಮ ಸೇನೆ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸುಂದ್ರೇಶ್ ಸೇರಿದಂತೆ ಅನೇಕ ಹಿಂದೂ ಮುಖಂಡರು ಈ ವೇಲೆ ಉಪಸ್ಥಿತರಿದ್ದರು.
Kshetra Samachara
17/02/2022 06:49 pm