ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಡಿಕೆಶಿ ಮನೆಗೆ ಮುತ್ತಿಗೆ ಹಾಕಿದ ಕನ್ನಡಪರ ಸಂಘಟನೆ

ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ‌ಮನೆ ಮುತ್ತಿಗೆ ಹಾಕುವ ಮೂಲಕ‌ ಕನ್ನಡಪರ‌ ಸಂಘಟನೆಗಳು ಶಾಕ್ ನೀಡಿವೆ. ಡಿಕೆ ಶಿವಕುಮಾರ್ ಜೊತೆಗೆ ಕೆಲ ಕಾಂಗ್ರೆಸ್ ನಾಯಕರ ಮನೆಗೂ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಿ ಘೋಷಣೆ‌ ಕೂಗಿದ್ದಾರೆ.

ಗೋವಾ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹದಾಯಿ ಗೋವಾಗೆ ಹರಿಸೊ ಭರವಸೆ ಹಿನ್ನೆಲೆ ಯಲ್ಲಿ ಕೆಂಡಮಂಡಲವಾದ ಕನ್ನಡಿಗರು, ರಾಜ್ಯದಲ್ಲಿ ಕಾವೇರಿ ನಮ್ಮ ಹಕ್ಕು ಅಂತ ಕಾಂಗ್ರೆಸ್ ಹೋರಾಟದ ಜೊತೆಗೆ ಪಾದಯಾತ್ರೆ ಮಾಡಿ‌‌ ಮಹದಾಯಿ ವಿಚಾರವಾಗಿ ಯಾಕೆ‌ ನಿರ್ಧಾರ ಅಂತ ಆಕ್ರೋಶ ವ್ಯಕ್ತಪಡಿಸಿವೆ.

ಗೋವಾದಲ್ಲಿ ಕಾಂಗ್ರೆಸ್ ಮಹದಾಯಿಯನ್ನ ಅವರಿಗೆ ನೀಡುವ ಭರವಸೆ ನೀಡಿದೆ. ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸ್ತಿದೆ ಅಂತಾ ಕನ್ನಡ ಪರ ಹೋರಾಟಗಾರರು ಡಿಕೆಶಿ ಅವರ ಸದಾಶಿವನಗರದ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

Edited By : Shivu K
PublicNext

PublicNext

14/02/2022 08:54 am

Cinque Terre

38.04 K

Cinque Terre

8

ಸಂಬಂಧಿತ ಸುದ್ದಿ