ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬದ್ಮಾಶ್ ಪಬ್‌ನಲ್ಲಿ ಕನ್ನಡ ಹಾಡು:ಕುಣಿದು ಕುಪ್ಪಳಿಸಿದ ಕರವೇ ಕಾರ್ಯಕರ್ತರು

ಬೆಂಗಳೂರು: ಕಳೆದ ರಾತ್ರಿ ಕೋರಮಂಗಲದ ಬದ್ಮಾಶ್ ಪಬ್‌ನಲ್ಲಿ ಕನ್ನಡ ಹಾಡು ಹಾಕದೆ ಗಾಂಚಲಿ ತೋರಿದ್ರು. ಇಂದು ಅದೇ ಪಬ್ ನಲ್ಲಿ ಅಣ್ಣಾವ್ರ, ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟ ಬೇಕು ಹಾಡು ಪ್ಲೇ ಆಗಿದೆ. ಅದಕ್ಕೆ ಕರವೇ‌ಕಾರ್ಯಕರ್ತರು ಸಖತ್ ಹೆಜ್ಜೆ ಕೂಡ ಹಾಕಿದ್ದಾರೆ.

ಬದ್ಮಾಶ್ ಪಬ್ ನಲ್ಲಿ ಕನ್ನಡ ಹಾಡನ್ನ ಹಾಕಲೇಬೇಕು ಅಂತಲೇ ಕರವೇ ಕಾರ್ಯಕರ್ತರು ಮತ್ತು ಕರವೇ ಕನ್ನಡ ಪ್ರಕಾಶ್‌ ಹೋರಾಟ ಮಾಡಿದರು. ಅದರ ಫಲವೇ ಇಂದು ಇಲ್ಲಿ ಕೊನೆಗೂ ಕನ್ನಡ ಹಾಡು ಪ್ಲೇ ಆಗಿದೆ.

ಈ ಕೂಡಲೇ ಡಿಜೆಯನ್ನ ಅರೆಸ್ಟ್ ಮಾಡಬೇಕು ಅಂತಾ ಕರವೇ ಕನ್ನಡ ಪ್ರಕಾಶ್‌ ಆಗ್ರಹಿಸಿದ್ರು.ಕೊನೆಗೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಸ್ಟೆಪ್ ಹಾಕಿ ಬದ್ಮಾಶ್ ಪಬ್ ಸಿಬ್ಬಂದಿಗಳ ಬೆವರಿಳಿಸಿದ್ದಾರೆ.

Edited By : Nagesh Gaonkar
PublicNext

PublicNext

06/02/2022 07:30 pm

Cinque Terre

34.79 K

Cinque Terre

8

ಸಂಬಂಧಿತ ಸುದ್ದಿ