ಬೆಂಗಳೂರು: ಸಾಮಾನ್ಯ ಜನ ಖಾಕಿ ಬಟ್ಟೆ ನೋಡಿದರೆ ಭಯ ಬೀಳುತ್ತಾರೆ. ಯಾರದ್ರೂ ಅವರ ಮೇಲೆ ಸಣ್ಣ ಕಿರಿಕ್ ಮಾಡಿದ್ರೂ ಅವ್ರು ಕೇಸ್ ಫೈಲ್ ಮಾಡಿ ಟ್ರಿಟ್ಮೆಂಟ್ ಕೊಡುವ ಟಾರ್ಚರ್ ಒಂದೆರಡಲ್ಲ. ಆದರೆ ಈ ವಿಚಾರ ಶಾಸಕರಿಗೆ ಅನ್ವಯಿಸಲ್ವಾ ಎನ್ನುವ ಪ್ರಶ್ನೆ ಎದ್ದಿದೆ. ಶಾಸಕರು ಪೊಲೀಸರನ್ನು ನಿಂದಿಸಿ ಅವರ ಮೇಲೆ ಹಲ್ಲೆಗೆ ಮುಂದಾದರೂ ಕೇಸ್ ಇಲ್ಲ ದೂರು ಇಲ್ಲ.
ಶಾಸಕರ ಭವನದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಶಾಸಕರ ದರ್ಪ ತೋರಿದ್ದಾರೆ ಎನ್ನಲಾಗುತ್ತಿದೆ. ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಂದ ಹೊಯ್ಸಳ ಪೊಲೀಸ್ ಸಿಬ್ಬಂದಿಗೆ ಅವಾಜ್ ಹಾಕಿದ್ದು, ಕರ್ತವ್ಯನಿರತ ಪೊಲೀಸರನ್ನು ನಿಂದಿಸಿದ್ದಾರೆ ಎಂದು ಆರೋಪಿಲಾಗಿದೆ.
ಅಲ್ಲಿ ನಡೆದಿದ್ದೇನು?:
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಕಾರು ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಶಾಸಕರ ಭವನ ಪ್ರವೇಶಿಸಿದೆ. ಇದೇ ವೇಳೆಗೆ ಗಸ್ತಿನಲ್ಲಿದ್ದ ಹೋಯ್ಸಳ ವಾಹನ ಅಡ್ಡ ಬಂದಿದೆ. ಈ ಸಮಯದಲ್ಲಿ ಹೋಯ್ಸಳ ವಾಹನ ಶಾಸಕರ ಭವನದ ಒಳಗೆ ಯಾಕ್ ಬಂದ್ರಿ ಎಂದು ಶಾಸಕರು ಪೊಲೀಸರನ್ನು ನಿಂದಿಸಿದ್ದಾರೆ.
ಈ ವೇಳೆ ನೈಟ್ ಬೀಟ್ ರೌಂಡ್ಸ್‌ನಲ್ಲಿದ್ದ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳು ಎಂದಿನಂತೆ ಪ್ರತಿದಿನ ಶಾಸಕರ ಭವನದ ಪಾಯಿಂಟ್‌ಗೆ ರೌಂಡ್ಸ್‌ಗೆ ಬಂದಿರುವುದಾಗಿ ಹೇಳಿದ್ದಾರೆ. ಈ ವೇಳೆ ಕುಮಾರಸ್ವಾಮಿ ನಾನು ಎಂಎಲ್ ಎಂದು ಏಕವಚನದಲ್ಲೆ ನಿಂದಿಸಿ ಪೇದಗಳ ಜೊತೆ ವಾಗ್ವಾದಕ್ಕಿಳಿದ್ದಾರೆ. ಈ ವೇಳೆ ಪೇದೆಗಳು ವಿಡಿಯೋ ಮಾಡಲು ಮುಂದಾದಾಗ ಅವರ ಮೇಲೆ ದರ್ಪ ಮೆರೆದು ಹಲ್ಲೆಗೂ ಮುಂದಾಗಿದ್ರು ಎಂದು ತಿಳಿದು ಬಂದಿದೆ. ಕೂಡಲೆ ಕಾನ್‌ಸ್ಟೇಬಲ್‌ಗಳು ಕಂಟ್ರೋಲ್ ರೂಮ್‌ಗೆ ಮಾಹಿತಿ ಕೊಟ್ಟಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದು ರಾಜೀ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
PublicNext
28/01/2022 10:35 am