ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಪ್ರತಿಭಟನೆ

ಆನೇಕಲ್ : ರಾಯಚೂರಿನಲ್ಲಿ ಅಂಬೇಡ್ಕರ ಚಿತ್ರಕ್ಕೆ ಅವಮಾನ ಮಾಡಿರುವ ಜಿಲ್ಲಾ ನ್ಯಾಯಾಧೀಶರ ಮಲ್ಲಿಕಾರ್ಜುನ ಗೌಡ ವಿರುದ್ಧ ದಲಿತ ಪರ ಸಂಘಟನೆ ಹಾಗೂ ಕಾರ್ಮಿಕ ಸಂಘಟನೆಗಳ ಒಕ್ಕೂಟ ಸಹಭಾಗಿತ್ವದಲ್ಲಿ ಇಂದು ಆನೇಕಲ್ ತಹಶಿಲ್ದಾರ್ ಕಚೇರಿಯೆದುರು ಪ್ರತಿಭಟನೆ ಮಾಡಿದ್ದರು

ತಾಲೂಕಿನ ತಹಸೀಲ್ದಾರ್ ಕಚೇರಿ ಎದುರು ದಲಿತ ಪರ ಸಂಘಟನೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಮತ್ತು ಅಂಬೇಡ್ಕರ್ ಗೆ ಅಪಮಾನ ಮಾಡಿರುವ ಮಲ್ಲಿಕಾರ್ಜುನ ಗೌಡ ನ್ಯಾಯಾಧೀಶ ಸ್ಥಾನದಿಂದ ವಜಾ ಮಾಡಬೇಕು .ಉದ್ದಟತನ ಹೇಳಿಕೆ ನೀಡಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿ ತಮಟೆ ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇನ್ನು ಬಹುಜನ ಸಮಾಜವಾದಿ ಪಾರ್ಟಿಯ ಅಭ್ಯರ್ಥಿ ಡಾಕ್ಟರ್ ಚಿನ್ನಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ನ್ಯಾಯ ಸ್ಥಾನದಲ್ಲಿ ಇದ್ದವರು ಇತರ ನಡಡ್ಕೊಂಡ್ರೆ ನಮ್ಮ ನಾಯಂಗ ವ್ಯವಸ್ಥೆಗೆ ಅಪಮಾನ. ಸಂವಿಧಾನಕ್ಕೆ ಆಗುವ ಅವಮಾನ.ಜತಗೆ ನಮ್ಮಲ್ಲಿ ನಾಯಂಗ ವ್ಯವಸ್ಥೆ ಹೇಗಿದೆ ಇದನ್ನ ನಾವ್ ಅರ್ಥ ಮಾಡ್ಕೋಬೇಕು .. ಪ್ರತಿಯೊಬ್ಬರು ಸಂವಿಧಾನದಲ್ಲಿ ಅಡಿಯಲ್ಲಿ ಬದುಕಿದ್ದರೆ ಇಂತಹ ಸಂದರ್ಭದಲ್ಲಿ ಇಂತಹ ಹೇಳಿಕೆ ಕೊಡುವ ವಿರುದ್ಧ ನಾವು ಖಂಡಿಸಬೇಕು ಇಂಥವರಿಗೆ ದೇಶದ್ರೋಹಿ ಗಡಿಪಾರ್ ಮಾಡಬೇಕು ಎಂದು ಬಹುಜನ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಚಿನ್ನಪ್ಪ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಕಾರ್ಯ ಕ್ರಮದಲ್ಲಿ ದಲಿತ ಸಂಘಟನೆಗಳ ಮುಖಂಡರು ಕಾರ್ಮಿಕ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು

Edited By : Nagesh Gaonkar
Kshetra Samachara

Kshetra Samachara

27/01/2022 04:53 pm

Cinque Terre

492

Cinque Terre

0

ಸಂಬಂಧಿತ ಸುದ್ದಿ