ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಚುನಾವಣೆ ಸನ್ನಿಹಿತ – ಸಚಿವ ಸೋಮಣ್ಣ ಸುಳಿವು

ಬೆಂಗಳೂರು: ಬಿಬಿಎಂಪಿ ಚುನಾವಣೆ ಸನ್ನಿಹಿತವಾಗಿದೇಯೇ...? ಇನ್ನೂ ಮೂರು ತಿಂಗಳಲ್ಲಿ ಚುನಾವಣೆ ಸರ್ಕಾರ ನಡೆಸಲಿದೇಯೆ...? ಈ ಬಗ್ಗೆ ಸಚಿವ ವಿ.ಸೋಮಣ್ಣ ಸುಳಿವು ನೀಡಿದ್ದಾರೆ.

ಹೌದು. ಗೋವಿಂದರಾಜ್ ನಗರ ವಿಧಾನ ಸಭಾ ಕ್ಷೇತ್ರದ ಮೂಡಲಪಾಳ್ಯ ವಾರ್ಡ್ ನಲ್ಲಿ ನಡೆದ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ್ ಸ್ವಾಮೀಜಿ ರವರ 3ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಬಿಬಿಎಂಪಿ ಚುನಾವಣೆ ಬಗ್ಗೆ ಮಾತನಾಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಸಲು ಸರ್ಕಾರ ಸಿದ್ದವಾಗಿದೆ.ಇನ್ನೂ ಮೂರು ತಿಂಗಳಲ್ಲಿ ಎಲೆಕ್ಷನ್ ನಡೆಯಲಿದೆ. ಆ ಬಗ್ಗೆ ಎಲ್ಲಾ ಸಿದ್ದತೆಗಳನ್ನು ಸರ್ಕಾರ ಹಾಗೂ ಪಕ್ಷ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

Edited By : Shivu K
PublicNext

PublicNext

22/01/2022 08:30 am

Cinque Terre

25.87 K

Cinque Terre

0

ಸಂಬಂಧಿತ ಸುದ್ದಿ