ಮೈಸೂರು: ಜನ ಜೀವ ಉಳಿಸಿಕೊಂಡಿದ್ದಾರೆ. ಜೀವನ ದುಸ್ಥರವಾಗಿದೆ.ಯಾವುದೇ ಕಾರಣಕ್ಕೂ ಲಾಕ್ ಡೌನ್ ಕಠಿಣ ನಿಯಮ ಜಾರಿಗೆ ತರಬೇಡಿ. ಹೀಗಂತ ತಮ್ಮದೇ ಸರ್ಕಾರಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಇಂದು ಮೈಸೂರಿನಲ್ಲಿ ಒತ್ತಾಯಿಸಿದ್ದಾರೆ.
ಮೊದಲ ಅಲೆಯಲ್ಲಿ ಆಸ್ಪತ್ರೆಯ ಸಮಸ್ಯೆ ಇತ್ತು. ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆ ಕಂಡು ಬಂತು. ವೆಂಟಿಲೇಟರ್ ಸಮಸ್ಯೆ ಕೂಡ ಇತ್ತು. ಆದರೆ ಈಗ ಎಲ್ಲ ಸಮಸ್ಯೆನೂ ಬಗೆಹರಿದಿದೆ ಎಂದು ವಿವರಿಸಿದ್ದಾರೆ ಪ್ರತಾಪ್ ಸಿಂಹ.
ಆ ಕಾನೂನು ಈ ಕಾನೂನು ಅಂತ ಜನರನ್ನ ಸಂಕಷ್ಟಕ್ಕೆ ಸಿಲುಕಿಸಬೇಡಿ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡಲೂ ಬೇಡಿ. ಆಸ್ಪತ್ರೆ ಸೌಲಭ್ಯ ಹೆಚ್ಚಿಸಿ ಅಂತಲೇ ಪ್ರತಾಪ್ ಸಿಂಹ ತಮ್ಮದೇ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.
PublicNext
17/01/2022 03:53 pm