ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಹಣ ಇಲ್ಲದೆ ಯಾವುದೇ ಕೆಲಸ ನಡೆಯೋದಿಲ್ಲ. ನಗರಸಭೆ ಸಿಬ್ಬಂದಿಯ ಲಂಚಾವತಾರದ ವಿರುದ್ಧ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ವಾಗ್ದಾಳಿ ನಡೆಸಿದರು. 3 ವರ್ಷಗಳ ನಂತರ ಮೊದಲ ಬಾರಿಗೆ ದೊಡ್ಡಬಳ್ಳಾಪುರ ನಗರಸಭೆಯ ಸಾಮಾನ್ಯ ಸಭೆ ನಡೆಯುತ್ತಿದೆ.
ನಗರಸಭೆ ವ್ಯಾಪ್ತಿಯಲ್ಲಿ ʼಇʼ ಖಾತೆ ಮಾಡಿಸೋದು ಅಷ್ಟು ಸುಲಭವಲ್ಲ. ಕನಿಷ್ಠ 10 ಸಾವಿರದಿಂದ ಹಿಡಿದು ಗರಿಷ್ಠ 5 ಲಕ್ಷ ವರೆಗೆ ಲಂಚ ನೀಡಿದರೆ ಮಾತ್ರ ʼಇʼ ಖಾತೆ ಸಿಗುತ್ತೆ. ಜನ ಸಾಮಾನ್ಯರಿಂದ ಲಂಚಾವತಾರದ ಬಗ್ಗೆ ದೂರು ಬರುತ್ತಲೇ ಇತ್ತು. ಇದರಿಂದ ರೋಸಿ ಹೋಗಿದ್ದ ನಗರಸಭೆ ಸದ್ಯಸರು ಅಧಿಕಾರಿಗಳು ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ 10- 15 ವರ್ಷಗಳಿಂದ ನಗರಸಭೆಯಲ್ಲಿ ಬೇರು ಬಿಟ್ಟಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿಸಿ ಎಂದು ಶಾಸಕರಿಗೆ ಮನವಿಯನ್ನೂ ಮಾಡಿದರು.
ಸರ್ಕಾರಕ್ಕೆ ಪತ್ರ ಬರೆದು ನಗರಸಭೆ ಸಿಬ್ಬಂದಿ ವರ್ಗಾವಣೆ ಮಾಡಿಸುವ ಬಗ್ಗೆ ಶಾಸಕರು ಭರವಸೆ ನೀಡಿದರು. ಇಲ್ಲಿ ನಡೆಯುತ್ತಿದ್ದ ಲಂಚಾವತಾರದ ಬಗ್ಗೆ ಸಾರ್ವಜನಿಕರು ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ನಗರಸಭೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಸಹ ನಡೆಸಿದ್ದರು.
Kshetra Samachara
13/01/2022 06:37 pm