ಬೆಂಗಳೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಡ್ರಾಮಾ ಮಾಡುತ್ತಿದೆ. ಇದರಿಂದ ಯೋಜನೆ ಜಾರಿಗೆ ತೊಂದರೆ ಆಗುತ್ತದೆ. ಆದರೂ ಪಾದಯಾತ್ರೆ ಮಾಡಲಾಗಿದೆ. ಈ ಸಂಬಂಧ ಈಗಾಗಲೇ 30 ಜನರ ವಿರುದ್ಧ ಕೇಸ್ ದಾಖಲಾಗಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮೇಕೇದಾಟು ವಿಚಾರದಲ್ಲಿ ರಾಜಕೀಯ ಡ್ರಾಮಾ ಮಾಡೋದು ಒಳ್ಳೆಯದು ಅಲ್ಲವೇ ಅಲ್ಲ.ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡುವುದರಿಂದ ತೊಂದರೇನೆ ಆಗುತ್ತದೆ. ಹೊರತು ಅನುಕೂಲ ಆಗೋದೇ ಇಲ್ಲ. ಸುಪ್ರಿಂ ಕೋರ್ಟ್ ನಲ್ಲೂ ತೊಂದರೇನೇ ಆಗುತ್ತದೆ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷ ಪ್ರಚಾರಕ್ಕಾಗಿಯೇ ಈ ಪಾದಯಾತ್ರೆ ಮಾಡುತ್ತಿದೆ. ಇದರಿಂದ ಡಿಕೆ ಶಿವಕುಮಾರ್ ಅವರಿಗೆ ಪ್ರಚಾರವೂ ಸಿಗುತ್ತದೆ. ಕಾಂಗ್ರೆಸ್ ಪಕ್ಷ ಸುದ್ದಿಯಲ್ಲಿಯೇ ಇರುತ್ತದೆ ಅಂತಲೇ ಟೀಕಿಸಿದ್ದಾರೆ ಅಶ್ವತ್ಥ ನಾರಾಯಣ.
PublicNext
10/01/2022 03:13 pm