ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆಗೆ ಕಾಂಗ್ರೆಸ್ ಪಕ್ಷವು ಕೈಗೊಂಡಿರುವ ಪಾದಯಾತ್ರೆಯು ರಾಜಕೀಯ ಉದ್ದೇಶವೆಂದರೆ ಸಚಿವ ಬೈರತಿ ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್ ಪುರಂ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಸ್ಥಗಿತವಾದ್ರೇ ಅದಕ್ಕೆ ನೇರ ಹೊಣೆ ಕಾಂಗ್ರೇಸ್ ಪಕ್ಷ, ಇಂತಹ ಗಂಭೀರವಾದ ವಿಷಯ ಕಾನೂನಿನ ಮೂಲಕ ಬಗೆಹರಿಸಬೇಕಾಗಿದೆ. ಮೇಕೆದಾಟು ಯೋಜನೆ ಆತ್ಯಂತ ಸೂಕ್ಷ್ಮವಾದ ವಿಷಯವಾಗಿದೆ. ಯೋಜನೆ ಜಾರಿಗೆ ಹಲವು ರೀತಿಯ ಕಾನೂನು ತೊಡಕುಗಳನ್ನ ನಿವಾರಿಸಬೇಕಿದೆ. ಈಗಾಗಲೇ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು ಮತ್ತು ಎನ್.ಜಿ.ಟಿ ಯಲ್ಲಿದೆ ಎಂದು ವಿವರಿಸಿದ್ದಾರೆ ಬೈರತಿ ಬಸವರಾಜ್.
ಈ ಯೋಜನೆಗೆ ತೊಂದರೆಯಾದ್ರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾರಣ ಆಗುತ್ತಾರೆ.
ಒಂದು ವೇಳೆ ಪಾದಯಾತ್ರೆ ಬೆಂಗಳೂರಿಗೆ ಬಂದು ಅದರಿಂದ ಕೋವಿಡ್ ಕೇಸ್ ಹೆಚ್ಚಾದರೆ ಅದಕ್ಕೂ ಕಾಂಗ್ರೆಸ್ ಪಕ್ಷವೇ ಹೊಣೆ ಎಂದೇ ಬೈರತಿ ಬಸವರಾಜ್ ಹೇಳಿದರು.
Kshetra Samachara
10/01/2022 01:39 pm