ಬೆಂಗಳೂರು: ನಿನ್ನೆ ರಾಮನಗರದಲ್ಲಿ ಸಂಸದ ಡಿ.ಕೆ. ಸುರೇಶ್ ನಡೆದುಕೊಂಡ ವರ್ತನೆ ಖಂಡಿಸಿ ಇಂದು ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಯಿತು.
ಸ್ಥಳೀಯ ಶಾಸಕ, ಅಬಕಾರಿ ಸಚಿವ ಕೆ. ಗೋಪಾಲಯ್ಯ ಮಾರ್ಗದರ್ಶನದಲ್ಲಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. "ರಾಮನಗರದಲ್ಲಿ ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ ಗೂಂಡಾ ಪ್ರವೃತ್ತಿ ಮೆರೆದಿದ್ದಾರೆ. ಇಡೀ ದೇಶದಲ್ಲಿ ಇಂತಹ ದುರ್ವರ್ತನೆಯಿಂದ ಕಾಂಗ್ರೆಸ್ ಮುಳುಗಿ ಹೋಗಿದ್ದು, ಅಧಿಕಾರ ವಂಚಿತರಾಗುತ್ತಿದ್ದ ಈ ಸಂದರ್ಭ ಹತಾಶೆ ಮನೋಭಾವ ಪ್ರದರ್ಶಿಸಿ, ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಇಡೀ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ.
ಡಿ.ಕೆ. ಸಹೋದರರು ಇಂತಹ ಹೀನ ಕೃತ್ಯಕ್ಕಾಗಿ ರಾಜೀನಾಮೆ ಕೊಡಬೇಕು" ಎಂದು ರಾಘವೇಂದ್ರ ಶೆಟ್ಟಿ ಆಗ್ರಹಿಸಿದರು.
ಬಿಬಿಎಂಪಿ ಮಾಜಿ ಉಪ ಮಹಾಪೌರ ಎಸ್. ಹರೀಶ್, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್. ಜಯರಾಂ, ಜಯಸಿಂಹ, ನಿಸರ್ಗ ಜಗದೀಶ್, ಶ್ರೀನಿವಾಸ್ ಬಿ.ಡಿ. ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/01/2022 10:54 pm