ದೇವನಹಳ್ಳಿ : ರಾಮನಗರದಲ್ಲಿ ಸಂಸದ ಡಿಕೆಶಿ ಹಾಗೂ ಸಚಿವ ಅಶ್ವಥ್ ನಾರಾಯಣ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ಶರತ್ ಬಚ್ಚೇಗೌಡ ನಿನ್ನೆ ನಡೆದ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಲ್ಲ ಪಕ್ಷದ ಕಾರ್ಯಕ್ರಮವಾಗಿತ್ತು, ಬಿಜೆಪಿ ಪಕ್ಷ ಸ್ಥಳೀಯ ಮಟ್ಟದಲ್ಲಿ ಶಾಸಕ ಮತ್ತು ಸಂಸದರನ್ನ ಕಡೆಗಣಿಸುತ್ತಿದೆ ಎಂದು ವಾಗ್ಥಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಜನವರಿ 9 ರಿಂದ 19ರ ವರೆಗೂ ಮೇಕೆದಾಟು ಪಾದಯಾತ್ರೆಯನ್ನ ಕೈಗೊಂಡಿದ್ದು, ಪಾದಯಾತ್ರೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಶಾಸಕ ರಾದ ಶರತ್ ಬಚ್ಚೇಗೌಡ ಮತ್ತು ವೆಂಕಟರಮಣಯ್ಯ ನೇತೃತ್ವದಲ್ಲಿ ಪೂರ್ವ ಸಿದ್ದತಾ ಸಭೆಯನ್ನ ಅಯೋಜನೆ ಮಾಡಲಾಗಿತ್ತು, ಇದೇ ಸಮಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ರಾಮನಗರದಲ್ಲಿ ಸಂಸದ ಸುರೇಶ್ ಹಾಗೂ ಸಚಿವ ಅಶ್ವಥ್ ನಾರಾಯಣ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು,
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯಕ್ರಮಗಳಿಗೆ ಬಿಜೆಪಿ ಸರ್ಕಾರ ಪ್ರೊಟಕಾಲ್ ಮಾಡ್ತಿಲ್ಲ, ಯಾವ ಜಿಲ್ಲೆಯಲ್ಲಿಯೂ ಸರಿಯಾಗಿ ಉಸ್ತುವಾರಿ ಸಚಿವರನ್ನ ನೇಮಕ ಮಾಡಿಲ್ಲ, ಸ್ಥಳೀಯ ಮಟ್ಟದಲ್ಲಿ ಶಾಸಕರು ಸಂಸದರನ್ನ ಬಿಜೆಪಿ ಕಡೆಗಣಿಸುತ್ತಿದೆ , ನೆನ್ನೆ ನಡೆದಿದ್ದು ಪಕ್ಷದ ಕಾರ್ಯಕ್ರಮವಲ್ಲ, ಇದೊಂದು ಸರ್ಕಾರಿ ಕಾರ್ಯಕ್ರಮಲಾಗಿತ್ತು, ಇಂತಹ ಕಾರ್ಯಕ್ರಮದಲ್ಲಿ ಡಿಕ್ಟೆಟರ್ ಶೀಪ್, ಏಕಾಧಿಪಾತ್ಯ ತರಲು ಬಿಜೆಪಿ ಹೊರಟಿದೆ ಎಂದು ಬಿಜೆಪಿ ಪಕ್ಷದ ವಿರುದ್ಧ ವಾಗ್ಥಳಿ ನಡೆಸಿದರು.
ಜನವರಿ 9 ರಿಂದ 19 ರವರೆಗೂ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಪಾದಯಾತ್ರೆಗೆ ಬರುವ ಎಲ್ಲರಿಗೂ ಮಾಸ್ಕ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ, ಪಾದಯಾತ್ರೆ ಮಾಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ತೆವೆ, ಎಲ್ಲಾ ಕಡೆ ಕೆಮಿಕಲ್ ಟಾಯ್ಲೆಟ್ ವ್ಯವಸ್ಥೆ ಮಾಡಿದ್ದೇವೆ,
ಸರ್ಕಾರ ಇವತ್ತಿನ ದಿನ ಜನರ ಪರವೂ ನಿಲ್ಲುತ್ತಿಲ್ಲ, ಜನ ಮಾಡುವಂತಹ ಹೋರಾಟ ವಿರುದ್ದ ಸರ್ಕಾರ ನಿಂತಿದೆ, ನೀರು ತರಲು ಸಾಧ್ಯವಾಗದ ಬಿಜೆಪಿ ಹೋರಾಟ ಹತ್ತಿಕ್ಕಲು ಹುನ್ನಾರ ಮಾಡ್ತಿದೆ, ಪಾದಯಾತ್ರೆ ಮೊಟಕುಗೊಳಿಸಲು ಸರ್ಕಾರ ಕೈ ಹಾಕಿದ್ರೆ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ರವರು ತೆಗೆದು ಕೊಳ್ಳುವ ತಿರ್ಮಾನಕ್ಕೆ ಬದ್ದರಾಗಿರುವುದ್ದಾಗಿ ಹೇಳಿದರು..
Kshetra Samachara
04/01/2022 05:45 pm