ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ಸಂಸದ ಡಿ.ಕೆ.ಸುರೇಶ್ ವಿರುದ್ಧ ಪ್ರತಿಭಟನೆ; "ಗೂಂಡಾಗಿರಿಯಿಂದ ನಾಡಿನ ಜನತೆಗೆ ಅವಮಾನ"

ಯಲಹಂಕ: ಮುಖ್ಯಮಂತ್ರಿಗಳು ಭಾಗವಹಿಸಿದ್ದ ರಾಮನಗರದ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಗೂಂಡಾಗಳಂತೆ ವರ್ತಿಸಿದ್ದಾರೆ. ಡಿ.ಕೆ.ಸುರೇಶ್ & ರವಿ ಬೆಂಬಲಿಗರು ಸಚಿವ ಡಾ.ಅಶ್ವತ್ಥ್ ನಾರಾಯಣ್ ಮೇಲೆ ಗೂಂಡಾಗಿರಿ ತೋರಿ ಇಡೀ ರಾಜ್ಯದ ಜನತೆಗೆ ಅವಮಾನವೆಸಗಿದ್ದಾರೆ. ಇವರ ದುರ್ನಡತೆ ಖಂಡಿಸಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌ ನೇತೃತ್ವದಲ್ಲಿ ಕ್ಷೇತ್ರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.

ಯಲಹಂಕ ಕೆಂಪೇಗೌಡ ಸರ್ಕಲ್ ನಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಡಿ.ಕೆ.ಸುರೇಶ್ ಹಾಗೂ ರವಿ ವಿರುದ್ಧ ಘೋಷಣೆ ಕೂಗಿದರು. ರಾಜ್ಯದ  ಮುಖ್ಯಮಂತ್ರಿ  ಹಾಗೂ ಮಂತ್ರಿಗಳು ಇರುವ ವೇದಿಕೆಯಲ್ಲೇ ಈ ರೀತಿ ವರ್ತಿಸಿದರೆ ಸಾಮಾನ್ಯ ಜನರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾತನಾಡಿ, "ಡಿ.ಕೆ.ಸುರೇಶ್ ಹಾಗೂ ರವಿ ಗೂಂಡಾಗಳಂತೆ ವರ್ತಿಸಿ, ಕರ್ನಾಟಕದ ಜನರೆಲ್ಲ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಬಿಜೆಪಿಯವರು ಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧರಾಗಿದ್ದೇವೆ... ಗೂಂಡಾಗಿರಿ ಮಾಡುವ ಪಕ್ಷ ನಮ್ಮದಲ್ಲ, ಗೂಂಡಾಗಿರಿಗೆ ಹೆದರುವುದೂ ಇಲ್ಲ" ಎಂದು ಆಕ್ರೋಶಿತರಾಗಿ ನುಡಿದರು.

ಯಲಹಂಕದ ರಾಜಾನುಕುಂಟೆ, ದಾಸನಪುರದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

* ಸುರೇಶ್‌ ಬಾಬು Public Next ಯಲಹಂಕ.

Edited By : Manjunath H D
Kshetra Samachara

Kshetra Samachara

04/01/2022 02:04 pm

Cinque Terre

320

Cinque Terre

0

ಸಂಬಂಧಿತ ಸುದ್ದಿ